ನವದೆಹಲಿ:ದೇಶಾದ್ಯಂತ ಏಕರೂಪದ ತೆರಿಗೆ ಪದ್ಧತಿ ಜಿಎಸ್ ಟಿ( ಸರಕು ಮತ್ತು ಸೇವಾ ತೆರಿಗೆ) ಜೂ.30ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದ್ದು, ದೇಶದ ಆರ್ಥಿಕತೆಯಲ್ಲಿ ಹೊಸ ಹೆಜ್ಜೆಯ ಈ ಸಂದರ್ಭವನ್ನು ಜನಮಾನಸದಲ್ಲಿ ಅವಿಸ್ಮರಣೀಯವಾಗಿಸಲು ಕೇಂದ್ರ ಸರ್ಕಾರ ಅದ್ದೂರಿ ಕಾರ್ಯಕ್ರಮ ಏರ್ಪಡಿಸಿದೆ.
ಜೂನ್ 30ರ ಮಧ್ಯರಾತ್ರಿ ಜಿಎಸ್ ಟಿ ಚಾಲನೆಗೆ ಸಂಸತ್ ಭವನದ ಸೆನೆಟ್ ಹಾಲ್ ಸಜ್ಜುಗೊಳ್ಳುತ್ತಿದ್ದು, ಮಧ್ಯರಾತ್ರಿ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. 12 ಗಂಟೆ ಹೊಡೆಯುತ್ತಿದ್ದಂತೆ, ಜಾಗಟೆ ಬಡಿಯುವ ಮೂಲಕ ಜಿಎಸ್‌ಟಿಯ ಆಗಮನವಾಯಿತು ಎಂದು ಸಾರಲಾಗುತ್ತದೆ ಎಂಬುದು ವಿಶೇಷ
ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.