Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾರ್ವಜನಿಕ ಹಸ್ತಮೈಥುನ ದೊಡ್ಡ ಅಪರಾಧವಲ್ಲ: ತಸ್ಲಿಮಾ ನಸ್ರೀನ್

ಸಾರ್ವಜನಿಕ ಹಸ್ತಮೈಥುನ ದೊಡ್ಡ ಅಪರಾಧವಲ್ಲ: ತಸ್ಲಿಮಾ ನಸ್ರೀನ್
ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2018 (17:53 IST)
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಬಸ್‌ನಲ್ಲಿ ಪಕ್ಕದಲ್ಲಿ ಕುಳಿತುಕೊಂಡಿದ್ದ ವ್ಯಕ್ತಿ ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಂಡಿದ್ದಕ್ಕಾಗಿ ದೆಹಲಿಯ ವಸಂತ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಅವನ ವಿರುದ್ಧ ಫೆಬ್ರುವರಿ 11 ರಂದು ಎಫ್ಐಆರ್ ದಾಖಲಿಸಿದ್ದಾಳೆ.
ಮಧ್ಯವಯಸ್ಸಿನ ವ್ಯಕ್ತಿಯೊಬ್ಬ ಮಾರ್ಗ ಸಂಖ್ಯೆ 774 ರಲ್ಲಿ ಚಲಿಸುತ್ತಿದ್ದ ಪ್ರಯಾಣಿಕರಿಂದ ತುಂಬಿದ್ದ ಕೇಸರಿ ಬಣ್ಣದ ಬಸ್‌ನಲ್ಲಿ 20 ವರ್ಷದ ಹುಡುಗಿಯ ಬಲಕ್ಕೆ ಕುಳಿತಿದ್ದ ವ್ಯಕ್ತಿಯೊಬ್ಬ ಪ್ಯಾಂಟಿನ ಜಿಪ್ ತೆಗೆದಿದ್ದಾನೆ ಮತ್ತು ಎಲ್ಲರ ಮುಂದೆಯೇ ಹಸ್ತಮೈಥುನ ಮಾಡಿಕೊಂಡಿದ್ದಾನೆ.
 
ನಡೆಯುತ್ತಿದ್ದ ಘಟನೆಗೆ ನೈಸರ್ಗಿಕವಾಗಿ ಅಸಹನೀಯವಾದ ಮಹಿಳೆ, ವ್ಯಕ್ತಿಯು ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾಳೆ ಮತ್ತು ಅದನ್ನು ಟ್ವೀಟ್ ಮಾಡಿದ್ದಾಳೆ. ಅವನು ಈ ಹ್ಯೇಯ ಕೃತ್ಯವನ್ನು ಮಾಡುತ್ತಿರುವಾಗ ತನ್ನ ಮೊಣಕೈಯನ್ನು ಬಳಸಿ ತನ್ನ ಸೊಂಟದ ಭಾಗವನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿದ್ದ ಎಂದು ಕೂಡಾ ಆರೋಪಿಸಿದ್ದಾಳೆ.
 
ಅಮಾನವೀಯ ಭಾಗ ಯಾವುದೆಂದರೆ:
 
ಅವಳು ಘಟನೆಯ ಕುರಿತು ಸಹ ಪ್ರಯಾಣಿಕರಿಗೆ ತಿಳಿಸಿದಾಗ ತನ್ನ ಸಹಾಯಕ್ಕೆ ಯಾರೂ ಬರಲಿಲ್ಲ ಎಂದು ಹೇಳಿದ್ದಾಳೆ. ಫೆಬ್ರವರಿ 12 ರಂದು ಪ್ರಕಟವಾದ ವರದಿಯ ಪ್ರಕಾರ ದೆಹಲಿ ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದಾರೆ.
 
ತಸ್ಲಿಮಾ ನಸ್ರೀನ್ ಅವರ ಪ್ರಕಾರ ಸಾರ್ವಜನಿಕ ಹಸ್ತಮೈಥುನವು ಸಂತ್ರಸ್ಥ ರಹಿತ ಅಪರಾಧವಾಗಿದೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
 
ಬಾಂಗ್ಲಾದೇಶದ ಲೇಖಕ ಮತ್ತು ಕಾರ್ಯಕರ್ತರಾದ ತಸ್ಲಿಮಾ ನಸ್ರೀನ್, ಟ್ವೀಟಿಗರನ್ನು ಅಚ್ಚರಿಗೊಳಿಸಲು, ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಂಡ ಪುರುಷರ ರಕ್ಷಣೆಗಾಗಿ ಟ್ವೀಟ್ ಮಾಡಿದ್ದಾರೆ.
 
ಪ್ರಯಾಣಿಕರಿಂದ ತುಂಬಿದ್ದ ದೆಹಲಿ ಬಸ್‌ನಲ್ಲಿ ಒಬ್ಬ ವ್ಯಕ್ತಿ ಹಸ್ತಮೈಥುನಗೊಂಡಿದ್ದಾನೆ. ಹೆಚ್ಚು ಅತ್ಯಾಚಾರಗಳಾಗುತ್ತಿರುವ ಈ ಯುಗದಲ್ಲಿ ದೊಡ್ಡ ಅಪರಾಧವೆಂದು ಪರಿಗಣಿಸಬಾರದು. ಪುರುಷರು ಅತ್ಯಾಚಾರ ಮತ್ತು ಕೊಲೆ ಮಾಡುವುದಕ್ಕಿಂತ ಹಸ್ತಮೈಥುನ ಮಾಡಕೊಳ್ಳುವುದು ಉತ್ತಮ. ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಒಂದು ಅಪರಾಧವೇ? ಆದರೆ ಇದು ಸಂತ್ರಸ್ಥ ರಹಿತ ಅಪರಾಧ.
 
ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ, ಅದೇನೆಂದರೆ ಲೈಂಗಿಕ ಆಸೆಗಳನ್ನು ಹೊಂದಿದವರನ್ನು ಕಡೆಗಣಿಸಬಾರದು, ವ್ಯಕ್ತಿ ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಸರಿ ಎಂಬ ಪ್ರತಿಪಾದನೆ ಮಾಡಿದ್ದಾರೆ ಮತ್ತು ಅವರ ಪ್ರಕಾರ ಇದು 'ಸಂತ್ರಸ್ಥ ರಹಿತ' ಅವರಾಧವಾಗಿದೆ.
 
ವ್ಯಕ್ತಿಯೊಬ್ಬನಿಗೆ ಸಾರ್ವಜನಿಕ ಸ್ಥಳದಲ್ಲಿ ತನ್ನ ಲೈಂಗಿಕ ಆಸೆಗಳನ್ನು ನಿಯಂತ್ರಿಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಟ್ವಿಟರ್ ಬಳಕೆದಾರರಿಗೆ ಪ್ರತಿಕ್ರಿಯಿಸಿತ್ತಾ, ನಸ್ರೀನ್ ಈ ರೀತಿಯಾಗಿ ಹೇಳಿದ್ದಾರೆ, "ಅವರು ನಿಯಂತ್ರಿಸಿಕೊಳ್ಳಬೇಕು. ಅದು ಅಪರಾಧವಲ್ಲ ಎಂದು ನಾನು ಹೇಳಲಿಲ್ಲ. ಅದು ದೊಡ್ಡ ಅಪರಾಧವಲ್ಲ ಎಂದು ನಾನು ಹೇಳುತ್ತೇನೆ. ಇದು ಒಂದು ಅಪರಾಧ, ಆದರೆ ಸಂತ್ರಸ್ಥ ರಹಿತ ಅಪರಾಧ.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಬ್ಬಾ..! ಬಜೆಟ್ ಓದಲು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡ ಸಮಯವೆಷ್ಟು ಗೊತ್ತಾ?!