ಕೊಯಂಬತ್ತೂರಿನಲ್ಲಿ ನಿರ್ಮಿಸಲಾಗಿರುವ 112 ಅಡಿ ಉದ್ದದ ಬೃಹತ್ ಶಿವನ ಮೂರ್ತಿಯನ್ನ ಪ್ರಧಾನಮಂತ್ರಿ ನರೇಂದ್ರಮೋದಿ ಲೋಕಾರ್ಪಣೆ ಮಾಡಿದ್ದಾರೆ. ಕಣ್ಣುಮುಚ್ಚಿ ನಿಶ್ಚಲ ಭಾವದ ಯೋಗದ ಭಂಗಿಯಲ್ಲಿರುವ ಈ ವಿಗ್ರಹ ಅತ್ಯಂತ ಅರ್ಥಪೂರ್ಣವಾದದ್ದು, ಈಶ ಫೌಂಡೇಶನ್ ಕೆಲ ತಾತ್ವಿಕ ಧಾರದ ಮೇಲೆ ಇದನ್ನ ನಿರ್ಮಿಸಿದೆ.
ಆದಿಯೋಗಿಯೆಂದರೆ ಮೊದಲ ಯೋಗಿ ಎಂಬ ಅರ್ಥ ಕೊಡುತ್ತದೆ. ಶಿವನು ಮೊದಲ ಯೋಗಿ ಎಂಬುದು ಇದರರ್ಥ. 15 ಸಾವಿರ ವರ್ಷಗಳ ಹಿಂದೆ ಶಿವನೇ ಯೋಗವನ್ನ ಪರಿಚರಿಸಿದ ಎಂಬ ನಂಬಿಕೆ ಇದೆ. ಇನ್ನೂ, 112 ಅಡಿ ಉದ್ದದ ವಿಗ್ರಹ 112 ವಿದಾನದ ಯೋಗಗಳನ್ನ ಸೂಚಿಸುತ್ತದೆ. 112 ಯೋಗಗಳ ಮೂಲಕ ವಿಮೋಚನೆ ಹೊಂದಬಹುದೆಂಬುದು ಇದರ ಅರ್ಥ
ಯೋಗದ ಮೂಲದ ಅಜ್ಞಾನ ತೊಲಗಿ ಜ್ಞಾನದ ಕಡೆಗೆ ಜಗತ್ತನ್ನ ಕೊಂಡೊಯ್ಯಲು ಈ ವಿಗ್ರಹ ಪ್ರೇರೇಪಣೆಯಾಗುತ್ತದೆ ಎಂಬುದು ಈಶ ಫೌಂಡೇಶನ್ ನಂಬಿಕೆ.