ಜಯಲಲಿತಾ ಸಾವಿನ ಕುರಿತಂತೆ ತನಿಖೆ ನಡೆಸುವುದಾಗಿ ತಮಿಳುನಾಡು ಹಂಗಾಮಿ ಸಿಎಂ ಓ ಪನ್ನೀರ್ ಸೆಲ್ವಂ ಘೋಷಿಸಿದ್ದಾರೆ.ವಿಧಾನಸಭೆಯಲ್ಲಿ ನನ್ನ ಸಾಮರ್ಥ್ಯ ತೋರಿಸುವುದಾಗಿಯೂ ಪನ್ನೀರ್ ಸೆಲ್ವಂ ಘೊಷಿಸಿದ್ದಾರೆ. ಆದರೆ, ಪನ್ನೀರ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈ ಘೋಷಣೆ ಮಾಡಿದಿದ್ದರೆ ಹೆಚ್ಚು ತೂಕಬರುತ್ತಿತ್ತು. ಆದರೆ, ಈಗ ಅಧಿಕಾರ ಕಳೆದುಕೊಳ್ಳುವ ಸಂದರ್ಭದಲ್ಲಿ ಸೆಲ್ವಂ ಈ ರೀತಿ ಹೇಳುತ್ತಿರುವುದು ಜಯಲಲಿತಾ ಹೆಸರನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ಪನ್ನೀರ್ ಸೆಲ್ವಂ ಮುಂದೆ ಸಾಲು ಸಾಲು ಪ್ರಶ್ನೆಗಳು
1.ಜಯಲಲಿತಾ ನಿಧನದ ದಿನವೇ ಅಧಿಕಾರ ವಹಿಸಿಕೊಂಡ ಪನ್ನೀರ್ ಸೆಲ್ವಂ 60 ದಿನಗಳಿಂದ ಜಯಾ ಸಾವಿನ ತನಿಖೆಗೆ ಘೋಷಿಸಲಿಲ್ಲವೇಕೆ..?
2. ತನಿಖೆಗೆ ಆದೇಶ ಮಾಡುವಲ್ಲಿ ಇಷ್ಟು ದಿನ ವಿಳಂಬ ಮಾಡಿದ್ದೇಕೆ..?
·
3. ಜಯಲಲಿತಾ ಸಾವಿನ ಕುರಿತು ಪನ್ನೀರ್ ಸೆಲ್ವಂ ಅನುಮಾನವಿತ್ತೇ..?
·
4. ಮದ್ರಾಸ್ ಹೈಕೋರ್ಟ್ ಮರುಮರಣೋತ್ತರ ಪರೀಕ್ಷೆ ಕುರಿತು ಸ್ಪಷ್ಟನೆ ಕೇಳಿದಾಗ ತನಿಖೆ ನಡೆಸುವುದಾಗಿ ಹೇಳಲಿಲ್ಲವೇಕೆ?
5. ಹಂಗಾಮಿ ಮುಖ್ಯಮಂತ್ರಿಯಾಗಿರುವ ಪನ್ನೀರ್ ಈಗ ತನಿಖೆಗೆ ಆದೇಶ ಮಾಡಿರುವುದು ಕಾನೂನಾತ್ಮಕವಾಗಿ ಮನ್ನಣೆ ಪಡೆಯುತ್ತದೆಯೇ..?
·
6. ಜಯಲಲಿತಾ ಹಸರನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರಾ..?
·
7. ಜಯಲಲಿತಾ ಸಾವಿನ ಬಗ್ಗೆ ಜನರಲ್ಲಿ ಸಂಶಯ ಮೂಡಿಸುವ ಯತ್ನವೇ..?