Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರತಿಯೊಂದು ಹನಿ ನೀರನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣ: ಪ್ರಧಾನಿ ನರೇಂದ್ರ ಮೋದಿ

ಪ್ರತಿಯೊಂದು ಹನಿ ನೀರನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣ: ಪ್ರಧಾನಿ ನರೇಂದ್ರ ಮೋದಿ
ದೆಹಲಿ , ಭಾನುವಾರ, 22 ಮೇ 2016 (13:22 IST)
'ನಾವು ಪ್ರತಿಯೊಂದು ಹನಿ ನೀರನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣ' ಎಂದು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನೀರು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿರುವ ನರೇಂದ್ರ ಮೋದಿ, ನೀರಿನ ಪ್ರತಿ ಹನಿಯನ್ನು ರಕ್ಷಣೆ ಮಾಡಬೇಕು.. ಅಲ್ಲದೇ ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಅಭಿಪ್ರಾಯಪಟ್ಟರು.
 
ನಿಮ್ಮೊಂದಿಗೆ ಮಾತನಾಡಲು ನನಗೆ ಚೈತನ್ಯವನ್ನುಂಟು ಮಾಡುತ್ತದೆ. ಪರಿಸರ ಕುರಿತು ನಮ್ಮ ನಿರ್ಲಕ್ಷ ಉಷ್ಣತೆ ಏರಲು ಸಹಾಯಕಾರಿಯಾದಿದೆ.

ಆದ್ದರಿಂದ ನೀರನ್ನು ಹಾಗೂ ಅರಣ್ಯವನ್ನು ರಕ್ಷಿಸಬೇಕು ಎಂದು ತಿಳಿಸಿದರು.. ಜೂನ್ 8 ಜಾಗತಿಕ ಪರಿಸರ ದಿನವಾಗಿದ್ದು, ಈ ಹಿನ್ನೆಲೆ ನಾವೆಲ್ಲರೂ ಅರಣ್ಯ ಹಾಗೂ ನೀರನ್ನು ಉಳಿಸಲು ಎಚ್ಚರಗೊಳ್ಳಬೇಕಾಗಿದೆ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ. 
 
ಇನ್ನೂ ಬರಪೀಡಿತ ರಾಜ್ಯಗಳ ಬಗ್ಗೆ ಮಾತನಾಡಿರುವ ಮೋದಿ, ಬರಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಅವಕಾಶ ದೊರತಿದೆ. ನಾನು ಪ್ರತಿಯೊಬ್ಬ ಮುಖ್ಯಮಂತ್ರಿಯನ್ನು ವೈಯಕ್ತಿಕವಾಗಿ ಭೇಟಿಯಾಗಲು ನಿರ್ಧರಿಸಿದ್ದೇನೆ ಎಂದು ಮೋದಿ ಇದೇ ವೇಳೆ ಹೇಳಿದ್ದಾರೆ.

ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ
 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನ ಪರಿಷತ್‌ಗೆ ಮತ್ತೊಂದು ಬಾರಿ ಅವಕಾಶ ನೀಡುವಂತೆ ವಿ.ಸೋಮಣ್ಣ ಮನವಿ