Webdunia - Bharat's app for daily news and videos

Install App

ಬೆಂಗಳೂರು-ಮಂಗಳೂರು ನೇರ ರೈಲು ಹಗಲು ಸಂಚಾರಕ್ಕೆ ನಾಳೆ ಚಾಲನೆ

Webdunia
ಶನಿವಾರ, 8 ಏಪ್ರಿಲ್ 2017 (07:50 IST)
ಹಾಸನ-ಯಶವಂತಪುರ ರೈಲು ಸಂಚಾರ ಆರಂಭವಾದ ಬಳಿಕ ಬೆಂಗಳೂರು ಮತ್ತು ಮಂಗಳೂರು ನೇರ ರೈಲು ಸಂಚಾರಕ್ಕೆ ಕಾಲ ಕೂಡಿ ಬಂದಿದೆ. ಬೆಂಗಳೂರು ಮತ್ತು ಮಂಗಳೂರು ನಡುವೆ ನೇರ ಸಂಚರಿಸುವ ಕುಡ್ಲ ಎಕ್ಸ್`ಪ್ರೆಸ್`ಗೆ ನಾಳೆ ರೈಲ್ವೆ ಸಚಿವ ಸುರೇಶ್ ಪ್ರಭು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.


ನೆಲಮಂಗಲ-ಶ್ರವಣಬೆಳಗೊಳ-ಹಾಸನ ಮಾರ್ಗವಾಗಿ ಈ ರೈಲು ಸಂಚರಿಸಲಿದೆ. ಭಾನುವಾರ, ಮಂಗಳವಾರ ಮತ್ತು ಗುರುವಾರ ಬೆಂಗಳೂರಿಂದ ಮಂಗಳೂರಿಗೆ(ಬೆಳಗ್ಗೆ 7ಕ್ಕೆ ಯಶವಂತಪುರದಿಂದ ಹೊರಟು ಸಂಜೆ 5.45ಕ್ಕೆ ಮಂಗಳೂರು ತಲುಪಲಿದೆ) ಮತ್ತು ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಂಗಳೂರಿನಿಂದ ಬೆಂಗಳೂರಿಗೆ(ಬೆಳಗ್ಗೆ 11.15ಕ್ಕೆ ಹೊರಟು ರಾತ್ರಿ10ಕ್ಕೆ ಸೇರಲಿದೆ) ಸಂಚರಿಸಲಿದೆ.

ಈ ರೈಲು ಮಾರ್ಗ ಆರಂಭವಾದ ಬಳಿಕ  ಮಂಗಳೂರು ಮತ್ತು ಬೆಂಗಳೂರು ನಡುವೆ 87 ಕಿ.ಮೀನಷ್ಟು ಸಂಚಾರ ಕಡಿಮೆಯಾಗಲಿದ್ದು, 3 ಗಂಟೆ ಪ್ರಯಾಣದ ಸಮಯ ತಗ್ಗಲಿದೆ. ರಾತ್ರಿ ಸಂಚರಿಸುವ ಮಂಗಳೂರು ಮತ್ತು ಬೆಂಗಳೂರು ರೈಲು ಮೈಸೂರು ಮಾರ್ಗವಾಗಿ ಹೂಗುವುದರಿಂದ ಹೆಚ್ಚುವರಿ ಸುತ್ತಾಗುತ್ತಿದೆ.

ಬೆಳಗಿನ ರೈಲು: ಸದ್ಯ ಮಂಗಳೂರಿಗೆ ರಾತ್ರಿ ರೈಲು ಸಂಚಾರ ಮಾತ್ರವಿದ್ದು, ನಾಳೆಯಿಂದ ಆರಂಭವಾಗಲಿರುವ ಕುಡ್ಲ ಎಕ್ಸ್`ಪ್ರೆಸ್ ರೈಲು ಬೆಳಗಿನ ಹೊತ್ತು ಸಂಚರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರ ಹಲವು ದಿನಗಳ ಕನಸು ನನಸಾಗಿದೆ.
ರೈಲು ಬೆಳಗಿನ ಸಂಚಾರದಿಂದ ಮಾರ್ಗಮಧ್ಯೆ ಸಿಗುವ ಪ್ರಾಕೃತಿಕ ಸೌಂದರ್ಯ ಸವಿಯುವ ಅವಕಾಶ ಪ್ರಯಾಣಿಕರಿಗೆ ಸಿಗಲಿದೆ. ಬೆಟ್ಟಗುಡ್ಡ, ಗುಹೆಗಳು, ಕಾಡು, ಝರಿಗಳನ್ನ ನೋಡುವ ಭಾಗ್ಯ ಸಿಗಲಿದೆ.

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments