ಅಗತ್ಯ ಕಾರ್ಯಕ್ಕಾಗಿ ತೆರಳಲು ಓಲಾ ಕ್ಯಾಬ್ ಪಡೆದುಕೊಂಡಿದ್ದ ಸುಶೀಲ್ ನರಸಿಯಾನ್, ಕೇವಲ 300 ಮೀಟರ್ ರೈಡ್‌ಗೆ ಬಂದ್ ಬಿಲ್ ನೋಡಿ ದಂಗಾದರು. ಬಿಲ್ ಎಷ್ಟು ಗೊತ್ತಾ ಕೇವಲ 149 ಕೋಟಿ ರೂಪಾಯಿ.
ಘಟನೆ ಏಪ್ರಿಲ್ 1 ರಂದು ನಡೆದಿದ್ದರಿಂದ ಬಹುತೇಕ ಓದುಗರು ಇದೊಂದು ಏಪ್ರಿಲ್ ಫೂಲ್ ಇರಬಹುದು ಎಂದು ಭಾವಿಸಿದ್ದರು. ಆದರೆ ನರಸಿಯಾನ್, ತಮಗೆ ಓಲಾ ಸಿಬ್ಬಂದಿಯಿಂದ ಬಂದ ಪ್ಲೇಸ್ ಮ್ಯಾಸೇಜ್ ಬುಕ್ಕಿಂಗ್ ಐಡಿ, ನಾವು ನೋಡಿಕೊಳ್ಳುತ್ತೇವೆ ಎನ್ನುವ ಸಂದೇಶವನ್ನು ಪೋಸ್ಟ್ ಮಾಡಿದ್ದರು.
ಮೂಲಗಳ ಪ್ರಕಾರ ತಾಂತ್ರಿಕ ದೋಷದಿಂದ 149 ಕೋಟಿ ರೂಪಾಯಿ ಬಿಲ್ ಬಂದಿದೆ. ಕಂಪೆನಿ ಕೇವಲ 127 ಮಾತ್ರ ಪಾವತಿಸಿಕೊಂಡು ಎರಡು ಗಂಟೆಗಳಲ್ಲಿ ಸಮಸ್ಯೆ ಇತ್ಯರ್ಥಗೊಳಿಸಿದೆ ಎನ್ನಲಾಗಿದೆ.
ಗ್ರಾಹಕನ ತೊಂದರೆ ಕುರಿತಂತೆ ವಿವರಣೆ ಪಡೆಯಲು ಓಲಾ ಸಿಬ್ಬಂದಿಗೆ ಫೋನ್ ಮಾಡಿದಾಗ ಯಾರೊಬ್ಬರು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.