ಕನ್ನಡದಲ್ಲಿ ಮಾತನಾಡು ಎಂದಿದಕ್ಕೆ ತಮಿಳಿಗನೊಬ್ಬ ಕನ್ನಡಿಗನಿಗೆ ಹರಿತವಾದ ಚಾಕುವಿನಿಂದ ಇರಿದ ಹೇಯ ಘಟನೆ ರಾಜಾಜಿನಗರದ ನವರಂಗ ಬಾರ್ನಲ್ಲಿ ನಡೆದಿದೆ.
ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವನನ್ನು ದೇವರಾಜ್ ಎಂದು ಗುರುತಿಸಲಾಗಿದ್ದು ಧರಣೇಂದ್ರ ಎಂಬುವವನಿಂದ ದಾಳಿಗೊಳಗಾಗಿದ್ದಾನೆ.
ಧರಣೇಂದ್ರ ತನ್ನ ಸ್ನೇಹಿತರ ಜತೆಯಲ್ಲಿ ತಮಿಳಿನಲ್ಲಿ ಮಾತನ್ನಾಡುತ್ತಿದ್ದ. ಅದಕ್ಕೆ ದೇವರಾಜ್ ನೀನಿರೋದು ಕರ್ನಾಟಕದಲ್ಲಿ ಕನ್ನಡ ಬಳಸು ಎಂದಿದ್ದಾನೆ. ಅಷ್ಟಕ್ಕೆ ಸಿಟ್ಟಾದ ಧರಣೇಂದ್ರ ದೇವರಾಜನಿಗೆ ಚಾಕುವಿನಿಂದ ಇರಿದಿದ್ದಾನೆ.
ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು ಆರೋಪಿಯನ್ನು ಬಂಧಿಸಿರುವ ರಾಜಾಜಿನಗರ ಠಾಣಾ ಪೊಲೀಸರು ಕೊಲೆ ಯತ್ನ ಪ್ರಕರಣವನ್ನು ವಿಚಾರಣೆಗೊಳಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ