ಮುಂಬೈ: ಪತ್ನಿ ಜೊತೆ ಕಲಹದಿಂದಾಗಿ ಸಿಟ್ಟಿಗೆದ್ದ ಪತಿ ಮೂವರು ಮಕ್ಕಳಿಗೆ ಇಲಿ ಪಾಷಾಣ ಹಾಕಿದ ಐಸ್ ಕ್ರೀಂ ನೀಡಿದ ಘಟನೆ ಮುಂಬೈನಲ್ಲಿ ನಡೆದಿದೆ. ಈ ಐಸ್ ಕ್ರೀಂ ತಿಂದ ಪರಿಣಾಮ ಮೂವರು ಮಕ್ಕಳ ಪೈಕಿ ಆರು ವರ್ಷದ ಪುತ್ರ ಸಾವನ್ನಪ್ಪಿದ್ದಾನೆ.
ಇನ್ನಿಬ್ಬರು ಮಕ್ಕಳಿಗೆ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ನಿ ಜೊತೆ ಜಗಳವಾಡಿದ ಬಳಿಕ ಪತಿ ಮೂವರು ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ ಐಸ್ ಕ್ರೀಂ ಕೊಡಿಸಿದ್ದ. ಈ ಐಸ್ ಕ್ರೀಂಗೆ ವಿಷ ಹಾಕಿದ್ದು ತಿಳಿಯದ ಮುಗ್ಧ ಮಕ್ಕಳು ಅದನ್ನು ಸೇವಿಸಿದ್ದರು. ಐಸ್ ಕ್ರೀಂ ತಿಂದ ಮಕ್ಕಳು ಹೊಟ್ಟೆನೋವಾಗುತ್ತಿದೆಯೆಂದು ನರಳುತ್ತಿದ್ದುದನ್ನು ಕಂಡು ತಾಯಿ ಆಸ್ಪತ್ರೆಗೆ ದಾಖಲಿಸಿದ್ದಾಳೆ.
ಈ ಸಂಬಂಧ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ಆರೋಪಿ ತಲೆಮರೆಸಿಕೊಂಡು ಪೊಲೀಸರು ಹುಡುಕಾಟ ನಡೆಸಿದ್ದಾರೆ.