ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂದುಕೊಂಡಿದ್ದ ಯುವಕನೊಬ್ಬ ಇನ್ನೇನು ಅಂತ್ಯಕ್ರಿಯೆ ಮಾಡಬೇಕು ಎನ್ನುವಾಗ ಎದ್ದು ಕುಳಿತ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮತ್ತೆ ಆತ ಸಾವನ್ನಪ್ಪಿದ್ದಾನೆ.
ಸತ್ತು ಬದುಕಿ ಮತ್ತೆ ಸತ್ತವನನ್ನು 23 ವರ್ಷದ ಸಂದೀಪ್ ಎಂದು ಗುರುತಿಸಲಾಗಿದ್ದು ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸುತ್ತಿರುವಾಗ ಆತನಿಗೆ ಹಾವು ಕಚ್ಚಿತ್ತು. ತಕ್ಷಣ ಮನೆಗೆ ಹಿಂತಿರುಗಿದ ಆತ ತನಗೆ ಹಾವು ಕಚ್ಚಿರುವುದನ್ನು ತಿಳಿಸಿದ. ಆತನನ್ನು ಆಸ್ಪತ್ರೆಗೆ ಸಾಗಿಸುವ ಬದಲು ಕುಟುಂಬದವರು ಮಂತ್ರವಾದಿಯ ಬಳಿ ಕರೆದೊಯ್ದರು. ಆತನ ಚಿಕಿತ್ಸೆಗೆ ಸಂದೀಪ್ ಸ್ಪಂದಿಸಲಿಲ್ಲ. ಕೊನೆಗೆ ಆತ ಸಾವನ್ನಪ್ಪಿದ್ದಾನೆ ಎಂದು ತಾಂತ್ರಿಕ ಘೋಷಿಸಿದ.
ಹಾವು ಕಚ್ಚಿ ಸತ್ತವರನ್ನು ಸುಡಬಾರದು, ಮಣ್ಣು ಮಾಡಬೇಕು ಎಂಬ ಧಾರ್ಮಿಕ ನಂಬಿಕೆಯಂತೆ ಆತನನ್ನು ಮಣ್ಣು ಮಾಡಲು ನಿರ್ಧರಿಸಲಾಯಿತು.
ಆದರೆ ವಾಸ್ತವವಾಗಿ ಆತ ಸತ್ತಿರಲಿಲ್ಲ. ಪ್ರಜ್ಞೆ ಕಳೆದುಕೊಂಡಿದ್ದ. ಇನ್ನೇನು ಮಣ್ಣು ಮಾಡಬೇಕು ಎನ್ನುವಾಗ ಆತ ಕಿರುಚತೊಡಗಿದ್ದಾನೆ. ಆತ ಬದುಕಿದ್ದಾನೆ ಎಂದು ತಿಳಿದ ಕೂಡಲೇ ಮತ್ತೆ ಅದೇ ತಾಂತ್ರಿಕನ ಬಳಿ ಕರೆದೊಯ್ಯಲಾಗಿದೆ. ಆದರೆ ಈ ಬಾರಿ ಆತ ನಿಜವಾಗಿಯೂ ಸತ್ತಿದ್ದಾನೆ.
ಗ್ರಾಮಸ್ಥರು ದೇಹವನ್ನು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದರು. ಆದರೆ ಆತ ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿದರು. ಗ್ರಾಮಸ್ಥರ ಕುರುಡು ನಂಬಿಕೆಯಿಂದ ಸಂದೀಪ್ ಪ್ರಾಣ ಕಳೆದುಕೊಳ್ಳುವಂತಾಯಿತು.
ಹಾವು ಕಚ್ಚಿ ಸತ್ತವನು ಅಂತ್ಯಕ್ರಿಯೆ ಮಾಡುವಾಗ ಎದ್ದು ಕುಳಿತ