ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಮಹಾರಾಷ್ಟ್ರದ ಶಾಲೆಗಳಲ್ಲಿ ಜಂಕ್ ಫುಡ್ ಮಾರಾಟವನ್ನ ನಿಷೇಧಿಸಲಾಗಿದೆ. ಅಧಿಕ ಪ್ರಮಾಣದ ಕೊಬ್ಬು, ಸಕ್ಕರೆ ಮತ್ತು ಉಪ್ಪಿನಾಂಸ ಹೊಂದಿರುವ ಜಂಕ್ ಫುಡ್ಸ್ ಮಕ್ಕಳಲ್ಲಿ ಒಬೆಸಿಟಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಖಡಕ್ ನಿರ್ಣಯ ಕೈಗೊಂಡಿದೆ.
ಯಾವುದೇ ಕಾರಣಕ್ಕೂ ಶಾಲೆಯ ಕ್ಯಾಂಟಿನ್`ಗಳಲ್ಲಿ ಜಂಕ್ ಫುಡ್ ಮಾರಾಟ ಮಾಡದಂತೆ ಖಚಿತಪಡಿಸುವ ಹೊಣೆಯನ್ನ ಶಾಲೆಯ ಪ್ರಾಂಶುಪಾಲರಿಗೆ ನೀಡಲಾಗಿದೆ. ಶಾಲೆಗಳಿಗಷ್ಠೆ ಅಲ್ಲ, ಸಿದ್ಧ ಆಹಾರ ಜಂಕ್ ಫುಡ್ ಮಾರದಂತೆ ವ್ಯಾಪಾರಸ್ಥರಿಗೂ ಕಟ್ಟಪ್ಪಣೆ ಮಾಡಲಾಗಿದೆ.
ಜಂಕ್ ಫುಡ್ ಬದಲಿಗೆ ಚಪಾತಿ, ರೈಸ್, ತರಕಾರಿ, ರಾಜ್ಮಾ, ಗೋಧಿ ಉಪ್ಪಿಟ್ಟು, ಪಾಯಸ, ಕಿಚಡಿ, ಇಡ್ಲಿ, ವಡಾ ಸಾಂಬರ್, ಎಳನೀರು, ನಿಂಬೆಪಾನೀಯ, ಮಜ್ಜಿಗೆ ರೀತಿಯ ಾಹಾರ ೊದಗಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ