ಮಹಾದಾಯಿ ನದಿ ನೀರು ಹಂಚಿಕೆಯ ವಿವಾದವನ್ನು ನ್ಯಾಯಮಂಡಳಿಯ ಮೂಲಕವೇ ಬಗೆಹರಿಸಿಕೊಳ್ಳಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಹೇಳಿದ್ದಾರೆ.
ಪ್ರಧಾನಮಂತ್ರಿ ಜೊತೆಗಿನ ಭೇಟಿಯ ವಿವರ ಹಂಚಿಕೊಳ್ಳಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮದವರು ಮಹಾದಾಯಿ ನೀರಿನ ವಿಚಾರದಲ್ಲಿ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಮಾಧ್ಯಮದವರ ಮೇಲೆ ಕೋಪಗೊಂಡು ಸುದ್ದಿಗಾಗಿ ಮಾಧ್ಯಮಗಳು ಮಹಾದಾಯಿ ವಿವಾದವನ್ನು ಸೃಷ್ಠಿಸಿವೆ ಎಂದಿದ್ದಾರೆ.
ಮಹಾದಾಯಿ ವಿವಾದ ನ್ಯಾಯಮಂಡಳಿಯ ಅಂಗಳದಲ್ಲಿದ್ದು, ಅಲ್ಲಿಯೇ ಹೋರಾಟ ಮಾಡಿ, ವಿವಾದ ಬಗೆಹರಿಸಲು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಆದರೆ ಡಿಸೆಂಬರ್ ತಿಂಗಳಲ್ಲಿ ಮಹಾದಾಯಿ ನೀರಿನ ವಿವಾದ ಮಾತುಕತೆಯ ಮೂಲಕ ಬಗೆಹರಿಸಲು ಸಿದ್ಧರಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದ, ಗೋವಾ ಮುಖ್ಯಮಂತ್ರಿ ಮತ್ತೆ ವರಸೆ ಬದಲಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.