ಲಕ್ನೋ : ಮೊಬೈಲ್ ನಲ್ಲಿ ಬ್ಲೂ ಫಿಲ್ಮ ನೋಡಿ 12 ವರ್ಷದ ಬಾಲಕನೊಬ್ಬ 5 ವರ್ಷದ ಬಾಲಕಿಯ ಮೇಲೆ ಆತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಪ್ರದೇಶದಲ್ಲಿ ನಡೆದಿದೆ.
ಸ್ನೇಹಿತರ ಮೋಬೈಲ್ನಲ್ಲಿದ್ದ ಬ್ಲೂ ಫಿಲ್ಮ ನೋಡಿ ಕೆರಳಿದ 12 ವರ್ಷದ ಬಾಲಕನೊಬ್ಬ ನೆರೆಮನೆಯ ಬಾಲಕಿಗೆ ಚಾಕೋಲೆಟ್ ನೀಡುವ ಆಸೆ ತೋರಿಸಿ ಮನೆಯಲ್ಲಿ ಪೋಷಕರು ಕೆಲಸಕ್ಕೆ ತೆರಳಿದ ವೇಳೆ ಆಕೆಯನ್ನು ತನ್ನ ಮನೆಗೆ ಕರೆದೊಯ್ದ ಅತ್ಯಾಚಾರ ಎಸಗಿದ್ದಾನೆ.
ಈ ಬಗ್ಗೆ ಬಾಲಕಿ ತನ್ನ ತಾಯಿಗೆ ಹೇಳಿದ್ದು, ಬಳಿಕ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಆರೋಪಿ ಬಾಲಕನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.