ಠಾಣೆ: ದೇಶಾದ್ಯಂತ ಲೋಕಸಭೆ ಚುನಾವಣೆಯ ಬಿಸಿ ಏರತೊಡಗಿದ್ದಂತೆ ರಾಜಕಾರಣಿಗಳು ಮತದಾರರನ್ನು ಖರೀದಿಸಲು ಹಣವನ್ನು ಹಂಚುವುದು ನಾವು ನೋಡಿದ್ದೇವೆ. ಇದೀಗ ಇದೇ ಸಂದರ್ಭದಲ್ಲಿಯೇ 200 ರೂ. ನಕಲಿ ನೋಟುಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮುಂಬೈನ ಠಾಣೆ ಜಿಲ್ಲೆಯಲ್ಲಿರುವ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬ ಗ್ರಾಮ ಪಂಚಾಯತಿಗೆ 200 ರೂಪಾಯಿ ಹಣ ಕಟ್ಟಲು ತೆರಳಿದ್ದಾಗ ಅದು ನಕಲಿ ನೋಟು ಎನ್ನುವುದು ಪತ್ತೆಯಾಗಿದೆ.
200 ರೂಪಾಯಿ ಮೌಲ್ಯದ ನಕಲಿ ನೋಟಿನಲ್ಲಿ ವಾಟರ್ ಮಾರ್ಕ್ ಇಲ್ಲ. ಆರ್‌ಬಿಐನ ಯಾವುದೇ ಗುರುತುಗಳು ಕಂಡು ಬಂದಿಲ್ಲ. ಅಸಲಿ 200 ರೂಪಾಯಿ ನೋಟಿಗಿಂತ ನಕಲಿ 200 ರೂ.ನೋಟು 2 ಮಿ.ಮಿ ಸೈಜ್‌ನಲ್ಲಿ ಚಿಕ್ಕದಿದೆ. ಇದನ್ನು ನೋಡಿದ ಜನರು ಲೋಕಸಭೆ ಚುನಾವಣೆ ಬಂದಿದ್ದರಿಂದ ಮತದಾರರನ್ನು ಏಮಾರಿಸಲು ನಕಲಿ ನೋಟುಗಳು ಮಾರುಕಟ್ಟೆಗೆ ಬಂದಿವೆ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕೈಗೆ ಬರುವ ನೋಟುಗಳ ಬಗ್ಗೆ ಜಾಗೃತೆ ವಹಿಸಿ ಪರಿಶೀಲಿಸಿದ ನಂತರವೇ ನಿಮ್ಮದಾಗಿಸಿಕೊಳ್ಳಿ. ಇಲ್ಲವಾದಲ್ಲಿ ಅಧೋಗತಿ.