Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚೀನಾದೊಂದಿಗೆ ಸ್ಪರ್ಧಿಸಬೇಕಾದ್ರೆ ದೇಶಾದ್ಯಂತ ಮದ್ಯ ನಿಷೇಧಿಸಿ: ನಿತೀಶ್ ಕುಮಾರ್

ಚೀನಾದೊಂದಿಗೆ ಸ್ಪರ್ಧಿಸಬೇಕಾದ್ರೆ ದೇಶಾದ್ಯಂತ ಮದ್ಯ ನಿಷೇಧಿಸಿ: ನಿತೀಶ್ ಕುಮಾರ್
ಪಾಟ್ನಾ , ಶುಕ್ರವಾರ, 14 ಅಕ್ಟೋಬರ್ 2016 (12:51 IST)
ಒಂದು ವೇಳೆ ಭಾರತ, ಚೀನಾದೊಂದಿಗೆ ಸ್ಪರ್ಧಿಸಲು ನಿಜವಾದ ಆಸಕ್ತಿ ಹೊಂದಿದ್ದಲ್ಲಿ ದೇಶಾದ್ಯಂತ ಮದ್ಯ ನಿಷೇಧ ಘೋಷಿಸಲಿ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
 
ದೇಶಾದ್ಯಂತ ಮದ್ಯ ಮಾರಾಟ ನಿಷೇಧಿಸಿದಲ್ಲಿ ಖಂಡಿತವಾಗಿಯೂ ಭಾರತ, ಎದುರಾಳಿ ಚೀನಾ ವಿರುದ್ಧ ಸ್ಪರ್ಧಿಸಲು ಸಾಧ್ಯ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಚೀನಾ ಮದ್ಯ, ಡಗ್ಸ್ ನಿಷೇಧ ಹೇರಿದ ನಂತರವೇ ಭಾರಿ ಅಭಿವೃದ್ಧಿಯನ್ನು ಕಂಡಿದೆ ಎಂದು ತಿಳಿಸಿದ್ದಾರೆ.
 
ದೇಶಾದ್ಯಂತ ಮದ್ಯ ಮಾರಾಟಕ್ಕೆ ನಿಷೇಧ ಹೇರುವುದು ಯಾವುದೇ ಸರಕಾರಕ್ಕೂ ಸವಾಲಿನ ಸಂಗತಿಯಾಗಿದೆ. ಆದರೆ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸಬೇಕಾದಲ್ಲಿ ಮದ್ಯ ನಿಷೇಧ ಅನಿವಾರ್ಯ ಎಂದು ಹೇಳಿದರು.
 
ಕಳೆದ ತಿಂಗಳು ಪಾಟ್ನಾ ಹೈಕೋರ್ಟ್ ಮದ್ಯ ನಿಷೇಧ ಹೇರಿದ ರಾಜ್ಯ ಸರಕಾರದ ಕ್ರಮಕ್ಕೆ ತಡೆಯೊಡ್ಡಿತ್ತು. ಆದರೆ, ರಾಜ್ಯ ಸರಕಾರ ಮತ್ತೊಮ್ಮೆ ಮದ್ಯ ಮಾರಾಟಕ್ಕೆ ನಿಷೇಧ ಹೇರಿದೆ ಎಂದು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬಿಜೆಪಿ ದಲಿತ ಸಮಾವೇಶ; ಮಾಜಿ ಐಎಎಸ್ ಕೆ. ಶಿವರಾಮ್ ಸೇರ್ಪಡೆ