ಲಿಂಡಿ ಕ್ಯಾಮೆರಾನ್ ಭಾರತದ ನೂತನ ಬ್ರಿಟಿಷ್ ರಾಯಭಾರಿ ಆಯ್ಕೆ
ನವದೆಹಲಿ , ಗುರುವಾರ, 11 ಏಪ್ರಿಲ್ 2024 (19:01 IST)
Photo Courtesy X
ನವದೆಹಲಿ: ಲಿಂಡಿ ಕ್ಯಾಮೆರಾನ್ ಅವರನ್ನು ಭಾರತದ ಹೊಸ ಬ್ರಿಟಿಷ್ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಎಕ್ಸ್‌ನಲ್ಲಿ ಅಧಿಕೃತ ಪೋಸ್ಟ್‌ನಲ್ಲಿ ತಿಳಿಸಿದ್ದು, ಭಾರತಕ್ಕೆ ಮುಂದಿನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಅವರನ್ನು ನೇಮಕ ಮಾಡಲಾಗಿದೆ. ಅದಲ್ಲದೆ ಈ ಹಿಂದೆ ಹುದ್ದೆಯಲ್ಲಿದ್ದ ಅಲೆಕ್ಸ್ ಎಲ್ಲಿಸ್‌ಗೆ ಕೃತಜ್ಞತೆಯನ್ನು ಸಲ್ಲಿಸಲಾಗಿದೆ.
ಯುನೈಟೆಡ್ ಕಿಂಗ್‌ಡಮ್ ಹೈ ಕಮಿಷನ್ ಪತ್ರಿಕಾ ಪ್ರಕಟಣೆಯ ಪ್ರಕಾರ, "ಲಿಂಡಿ ಕ್ಯಾಮೆರಾನ್ ಅವರು ಈ ಹಿಂದೆಯಿದ್ದ ಅಲೆಕ್ಸ್ ಎಲ್ಲಿಸ್ ಅವರ ಹುದ್ದೆಯನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ. ಇನ್ನೂ ಅಲೆಕ್ಸಾ ಅವರನ್ನು ರಾಜತಾಂತ್ರಿಕ ಸೇವೆಯ ನೇಮಕಾತಿಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ
ಲಿಂಡಿ ಕ್ಯಾಮೆರಾನ್ ಅವರು 2020 ರಿಂದ ಯುಕೆ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಯುಕೆಯ ಉತ್ತರ ಐರ್ಲೆಂಡ್ ಕಛೇರಿಯ ಮಹಾನಿರ್ದೇಶಕರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದರು.
ಯುಕೆ ಮತ್ತು ಭಾರತವು ದೀರ್ಘಾವಧಿಯಿಂದ ಬಾಕಿ ಉಳಿದಿರುವ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಯಲ್ಲಿ ತೊಡಗಿರುವ ಕಾರಣ ಅವರನ್ನು ನೇಮಕ ಮಾಡಲಾಗಿದೆ.
ಮುಂದಿನ ಸುದ್ದಿ