ಕಾಶ್ಮಿರದಲ್ಲಿನ ಜೀವನ ನಾಜಿ ಅಡಳಿತಾವದಿಗಿಂತ ಕೆಟ್ಟದಾಗಿದೆ ಎಂದು ಶ್ರೀನಗರದ ಪಿಡಿಪಿ ಸಂಸದ ತಾರೀಕ್ ಕರ್ರಾ ತಮ್ಮದೇ ಪಕ್ಷದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್‌ಗೆ, ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಮಾತನಾಡಿದ ಪಿಡಿಪಿ ಪಕ್ಷದ ಸಂಸದ ತಾರೀಕ್, ರಾಜ್ಯಾದ್ಯಂತ ಹತ್ಯೆಗಳು ನಡೆಯುತ್ತಿವೆ. ನಾಜಿ ಅಧಿಕಾರವಧಿಗಿಂತಲೂ ಜನರನ್ನು ಕೆಟ್ಟದಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮಿರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜನರು ಈದ್ ಹಬ್ಬದ ಪ್ರಾರ್ಥನೆ ಮಾಡಲು ಸಾಧ್ಯವಾಗಿಲ್ಲ. ಮಂದಿರ ಮಸೀದಿಗಳನ್ನು ಮುಚ್ಚಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಮತ್ತು ರಾಜ್ಯದಲ್ಲಿ ಪಿಡಿಪಿ ಸರಕಾರದ ಕೀಳು ರಾಜಕೀಯ ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಗುಡುಗಿದ್ದಾರೆ.
ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಪಿಡಿಪಿ ಸರಕಾರದ ಮುಂದೆ ಕೈಗೊಂಬೆಯಾಗುವುದು ಅಥವಾ ಶರಣಾಗುವುದು ನನ್ನಿಂದ ಸಾಧ್ಯವಿಲ್ಲವಾದ್ದರಿಂದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ ಎಂದು ಪಿಡಿಪಿ ಸಂಸ್ಥಾಪಕ ಮಾಜಿ ಸಂಸದ ತಾರೀಕ್ ಕಾರ್ರಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ