ನವದೆಹಲಿ: ವಿವಾಹವಾದ 30 ದಿನದೊಳಗೆ ಕಡ್ಡಾಯವಾಗಿ ವಿವಾಹವನ್ನು ನೋಂದಣಿ ಮಾಡಿಸಬೇಕು ಎಂದು ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಒಂದು ವೇಳೆ ಸಮರ್ಪಕವಾದ ಕಾರಣವಿಲ್ಲದೇ ಮದುವೆಯಾದ ಒಂದು ತಿಂಗಳಲ್ಲಿ ಮದುವೆ ನೋಂದಣಿ ಮಾಡಿಸದಿದ್ದಲ್ಲಿ ದಿನದ ಆಧಾರದ ಮೇಲೆ ದಂಡ ವಿಧಿಸುವಂತೆ ಸೂಚನೆ ನೀಡಲಾಗಿದೆ.
ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಎಲ್ಲಾ ಧರ್ಮದವರ ಮದುವೆ ನೋಂದಣಿಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿರುವುದು ವಿಶೇಷ.