ರಾಷ್ಟ್ರ ಭಾಷೆಯ ವಿಚಾರವಾಗಿ ಒಂದಿಲ್ಲೊಂದು ಹೇಳಿಕೆ ನಿತ್ಯವೂ ಬರುತ್ತಿದೆ.
ಕಿಚ್ಚ ಸುದೀಪ್ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಂತೆಯೇ ಅತ್ತ ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಅಂತ ಒಪ್ಪದೇ ಇದ್ದರೆ ಹಿಂದಿಯಲ್ಲಿ ನಿಮ್ಮ ಸಿನಿಮಾಗಳನ್ನು ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ? ಎಂದು ಕೇಳಿದರು.
ಇಲ್ಲಿಗೆ ರಾಷ್ಟ್ರ ಭಾಷೆ ಮತ್ತು ಇತರ ಭಾಷೆಗಳ ಮಧ್ಯೆ ದೊಡ್ಡ ಚರ್ಚೆಯೇ ಶುರುವಾಗಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸೋನಂ, ಭಾಷಾ ವಿಚಾರದಲ್ಲಿ ದೇಶವನ್ನು ಒಡೆಯುವಂತೆ ಕೆಲಸ ಮಾಡುತ್ತಿದ್ದಾರೆ.
ಹಿಂದಿಗಿಂತಲೂ ಹೆಚ್ಚು ಪುರಾತನ ಭಾಷೆ ತಮಿಳು. ಹಾಗಾದರೆ, ತಮಿಳು ರಾಷ್ಟ್ರ ಭಾಷೆ ಎನ್ನುವುದಕ್ಕೆ ಆಗತ್ತಾ? ನಾವು ಎಲ್ಲಿಯೇ ಹೋದರೂ ಇಂಗ್ಲಿಷ್ ಬಳಕೆ ಆಗುತ್ತಿದೆ. ಕೋರ್ಟ್ ನಲ್ಲೂ ಇಂಗ್ಲಿಷ್ ಅನ್ನೇ ಬಳುಸುತ್ತಾರೆ. ಹಾಗಾಗಿ ಹಾಗಾಗಿ ಇಲ್ಲಿ ರಾಷ್ಟ್ರ ಭಾಷೆ ಎನ್ನುವುದೇ ಉದ್ಭವಿಸಲ್ಲ ಎಂದಿದ್ದಾರೆ.