ಬಿಜೆಪಿಯನ್ನು ಬಿಹಾರ್ನಲ್ಲಿ ಸೋಲಿಸಿದಂತೆ ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕೂಡಾ ಸೋಲಿಸಿ ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕರೆ ನೀಡಿದ್ದಾರೆ.
ಬಿಹಾರ್ ಜನತೆ ಬಿಜೆಪಿಗೆ ಚುನಾವಣೆಯಲ್ಲಿ ಸೋಲಿನ ಪಾಠ ಕಲಿಸಿದಂತೆ ಉತ್ತರಪ್ರದೇಶ ಜನತೆ ಕೂಡಾ ಬಿಜೆಪಿಗೆ ತಕ್ಕ ಸೋಲಿನ ಪಾಠ ಕಲಿಸಬೇಕು ಎಂದು ಲಾಲು ಟ್ವೀಟ್ ಮಾಡಿದ್ದಾರೆ.
ಗೌರವಶಾಲಿ ಬಿಜೆಪಿ ಜನತೆ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದಾರೆ. ಇದೀಗ ಉತ್ತರಪ್ರದೇಶದ ಜನತೆಯ ಸರದಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಶಾಂತಿ ಮತ್ತು ಸಹೋದರತೆ ಕಾಪಾಡುವ ನಿಟ್ಟಿನಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಬಿಜೆಪಿ ಅವಕಾಶವಾದಿಗಳ ಪಕ್ಷವಾಗಿದೆ. ಉತ್ತರಪ್ರದೇಶದ ಜನತೆ ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ