Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಜೆಪಿ ಕಾರ್ಯಕರ್ತರಿಗೆ ಬುದ್ಧಿ ಕಲಿಸಿದ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಅಧಿಕಾರಿ

ಬಿಜೆಪಿ ಕಾರ್ಯಕರ್ತರಿಗೆ ಬುದ್ಧಿ ಕಲಿಸಿದ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಅಧಿಕಾರಿ
ಲಖನೌ , ಸೋಮವಾರ, 26 ಜೂನ್ 2017 (13:25 IST)
ಉತ್ತರಪ್ರದೇಶದ ಸಯಾನಾದಲ್ಲಿ ತನ್ನ ವಿರುದ್ಧ ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಮಹಿಳಾ ಪೊಲೀಸ್ ಅಧಿಕಾರಿ ನಡುಬೀದಿಯಲ್ಲಿ ಬುದ್ಧಿ ಕಲಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
 

ಜಿಲ್ಲಾ ಪಂಚಾಯ್ತಿ ಸದಸ್ಯೆಯೊಬ್ಬರ ಪತಿ ಪ್ರಮೋದ್ ಲೋಧಿ ಎಂಬಾತನ ವಾಹನ ತಡೆದಿದ್ದ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠ ಠಾಕೂರ್, ಸೂಕ್ತ ಸಂಚಾರಿ ದಾಖಲೆ ಇಲ್ಲದ ಕಾರಣ ಆತನನ್ನ ಬಂಧಿಸಿ ಜೈಲಿಗಟ್ಟಿದ್ಧಾರೆ. ಇದೇ ವಿಷಯಕ್ಕೆ ಮಹಿಳಾ ಪೊಲೀಸ್ ಅಧಿಕಾರಿಯನ್ನ ಸುತ್ತುವರೆದ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಲಾರಂಭಿಸಿದ್ದರು.




ಈ ಸಂದರ್ಭ ಕಾರ್ಯಕರ್ತರನ್ನ ತರಾಟೆಗೆ ತೆಗೆದುಕೊಂಡ ಮಹಿಳಾ ಪೊಲೀಸ್ ಅಧಿಕಾರಿ, ನಿಮ್ಮ ವಾಹನಗಳನ್ನ ಪರೀಕ್ಷಿಸಬಾರದೆಂದು ಮುಖ್ಯಮಂತ್ರಿಗಳಿಂದ ಪತ್ರ ಬರೆಸಿಕೊಂಡು ಬನ್ನಿ, ನೀವು ಈ ಗಲಾಟೆ ಮಾಡಿರೋದ್ರಿಂದ ಐಪಿಸಿ ಸೆಕ್ಷನ್ ಅಡಿ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ. ದಿಟ್ಟ ಅಧಿಕಾರಿಯ ಈ ಕಾರ್ಯವೈಖರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಶಂಸೆ ವ್ಯಕ್ತವಾಗಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆಯಲ್ಲಿ ಹುಡುಕಿದರೂ ಕಾಂಗ್ರೆಸ್‌ನವರು ಸಿಗಬಾರದು: ಬಿಎಸ್‌ವೈ