Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

13 ಗಂಟೆಗಳ ಕಾಲ ಪ್ರವಾಹದೊಂದಿಗೆ ಹೋರಾಡಿ ಬದುಕಿದ 62ರ ಮಹಿಳೆ

13 ಗಂಟೆಗಳ ಕಾಲ ಪ್ರವಾಹದೊಂದಿಗೆ ಹೋರಾಡಿ ಬದುಕಿದ 62ರ ಮಹಿಳೆ
ಬುರ್ದವಾನ್ , ಸೋಮವಾರ, 31 ಜುಲೈ 2017 (16:36 IST)
ದಾಮೋದರ್ ನದಿಯ ಪ್ರವಾಹ ಹೆಚ್ಚುತ್ತಿರುವುದನ್ನು ನೋಡುವ ಆಸಕ್ತಿಯಿಂದ ತೆರಳಿದ್ದ ಪೂರ್ವ ಬುರ್ದವಾನ್ ಜಿಲ್ಲೆಯ ಕಾಲಿಬಜಾರ್ ನಿವಾಸಿಯಾದ 62 ವರ್ಷ ವಯಸ್ಸಿನ ಅಂಗನವಾಡಿ ಮಹಿಳಾ ಉದ್ಯೋಗಿ ತಪಾತಿ ಚೌಧರಿ, ಕಾಲು ಜಾರಿ ನದಿಗೆ ಬಿದ್ದು ಸುಮಾರು 13 ಗಂಟೆಗಳ ಕಾಲ ನೀರಿನಲ್ಲಿ ತೇಲಾಡಿ 80 ಕಿ.ಮೀ ದೂರ ಪ್ರಯಾಣಿಸಿದ ನಂತರ ಜೀವ ಉಳಿಸಿಕೊಂಡ ವಿಚಿತ್ರ ಘಟನೆ ವರದಿಯಾಗಿದೆ. 
 
ನದಿಯ ಪ್ರವಾಹ ನೋಡಲು ಬಂದ ತಪಾಟಿ ಚೌಧರಿ, ಕಾಲು ಜಾರಿ ನದಿಗೆ ಬಿದ್ದ ಕೂಡಲೇ ಕ್ಷಣಾರ್ಧದಲ್ಲಿಯೇ ಕೊಚ್ಚಿಹೋಗಲು ಆರಂಭಿಸಿದಳು. ನೆರವಿಗಾಗಿ ಕೂಗಿದಳು. ಆದರೆ, ಹತ್ತಿರದಲ್ಲಿ ಯಾರು ಇರಲಿಲ್ಲವಾದ್ದರಿಂದ ಆಕೆಯ ಕೂಗು ಯಾರಿಗೂ ಕೇಳದಾಯಿತು. ಧೈರ್ಯ ತಂದುಕೊಂಡು ಪೂರ್ತಿ ರಾತ್ರಿ ಕೈ ಕಾಲು ಬಡಿಯುತ್ತಾ ಕಳೆದಿದ್ದಾಳೆ. ಆದರೆ, ಆಕೆಯ ಹೋರಾಟ ಕೊನೆಗೂ ವ್ಯರ್ಥವಾಗಲಿಲ್ಲ. 
 
ಮಾರನೇ ದಿನ ಬೆಳಿಗ್ಗೆ ಮಹಿಳೆಯೊಬ್ಬಳು ನೀರಿನಲ್ಲಿ ತೇಲುತ್ತಿರುವುದು ಕಂಡ ಮೀನುಗಾರರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಆಕೆಯನ್ನು ಬಿಡುಗಡೆಗೊಳಿಸಲಾಗಿದೆ.
 
ಚೌಧರಿ ಹೇಳಿದರು, "ಈ ಸ್ಥಳವು ಹೂಗ್ಲಿ ಜಿಲ್ಲೆಯ ಪರ್ಸುರಾದಲ್ಲಿ ಮುಂಡೇಶ್ವರಿ ನದಿಯ ಮಾರ್ಕುಂಡ ಫೆರ್ರಿ ಘಾಟ್ ಎಂದು ನಾನು ತಿಳಿದುಕೊಂಡಿದ್ದೇನೆ, ಅವರು ನದಿಯೊಳಗೆ ಬಿದ್ದ ಸ್ಥಳದಿಂದ 80 ಕಿ.ಮೀ.
 
ಚಿಕಿತ್ಸೆಯ ನಂತರ ಚೇತರಿಸಿಕೊಂಡ ಮಹಿಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ನದಿಗೆ ಬಿದ್ದ ಸ್ಥಳದಿಂದ 80 ಕಿ.ಮೀ ದೂರದಲ್ಲಿರುವ ಹೂಗ್ಲಿ ಜಿಲ್ಲೆಯ ಮುಂಡೇಶ್ವರಿ ನದಿಯ ಮಾರ್ಕುಂಡಾ ಘಾಟ್‌ ಬಳಿ ತಲುಪಿದ್ದೆ ಎಂದು ತಿಳಿಸಿದ್ದಾರೆ. 
 
ಆಘಾತದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗದ ಚೌಧರಿ, ಸಾವಿನ ದವಡೆಯಿಂದ ಹೇಗೆ ತಪ್ಪಿಸಿಕೊಂಡಿದ್ದೇನೆ ಎನ್ನುವುದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಹಾರ್‌ನಲ್ಲಿ ಜೆಡಿಯು-ಬಿಜೆಪಿ ಮೈತ್ರಿ ದುರದೃಷ್ಟಕರ: ಶರದ್ ಯಾದವ್ ಕಿಡಿ