ನವದೆಹಲಿ: ಭಾರತದ ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅಧಿಕಾರಾವಧಿ ಮುಗಿಯುತ್ತಾ ಬಂದಿದೆ. ಈ ಹಿನ್ನಲೆಯಲ್ಲಿ ಹೊಸದಾಗಿ ಈ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಪ್ರಶ್ನೆ ಮೂಡಿದೆ.
ಬಿಜೆಪಿ ಮೂಲಗಳ ಪ್ರಕಾರ ಬಿಹಾರದ ಬಿಜೆಪಿ ಹಿರಿಯ ನಾಯಕ ಹುಕುಂ ದೇವ್ ನರೈನ್ ಯಾದವ್ ಹೊಸ ರಾಷ್ಟ್ರಪತಿಯಾಗಲಿದ್ದಾರಂತೆ. ಈಗಾಗಲೇ ಬಿಜೆಪಿ ಮತ್ತು ಮಿತ್ರ ಕೂಟ ತಮ್ಮ ಅಭ್ಯರ್ಥಿಯಾಗಿ ಹುಕುಂ ಯಾದವ್ ಅವರನ್ನು ಆರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಐದು ಬಾರಿ ಬಿಹಾರದಿಂದ ಬಿಜೆಪಿ ಸಂಸದರಾಗಿ ಅನುಭವವಿರುವ ಹುಕುಂ ದೇವ್, ಸಂಸತ್ತಿನಲ್ಲಿ ಹಲವಾರು ಬಾರಿ ನಿರ್ಭೀತಿಯಿಂದ ಮಾತನಾಡಿದ ಖ್ಯಾತಿ ಹೊಂದಿದ್ದಾರೆ. ಬಿಹಾರದವರಾದ ಕಾರಣ ಪ್ರಧಾನಿ ಮೋದಿ ಬದ್ಧವೈರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡಾ ಹುಕುಂ ದೇವ್ ರನ್ನು ಬೆಂಬಲಿಸುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ