ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಪ್ರಮುಖು ರೂವಾರಿ, ಸಿಎಂ ಸ್ಥಾನದ ಆಕಾಂಕ್ಷಿ, ಉತ್ತರಪ್ರದೇಶದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಜೆಪಿಯ ಪ್ರಚಂಡ ಜಯದ ಬಳಿಕ ಸಿಎಂ ಆಯ್ಕೆ ಕಸರತ್ತು ನಡೆಯುತ್ತಿದ್ದು, ಮೌರ್ಯ ಸಹ ದೆಹಲಿಯಲ್ಲೇ ಇದ್ದಾರೆ. ಮಧ್ಯಾಹ್ನ ಅವರನ್ನ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಕ್ತದೊತ್ತಡದ ಕಾರಣ ಮೌರ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದ್ದು, ಒಂದು ದಿನ ತೀವ್ರ ನಿಗಾ ಘಟಕದಲ್ಲೇ ಇರಲಿದ್ದು, ನಾಳೆ ಡಿಸ್ಚಾರ್ಜ್ ಆಗಲಿದ್ದಾರೆ.
ಬೆಳಗ್ಗೆ ತಾನೆ ಸಿಎಂ ಸ್ಥಾನದ ಆಯ್ಕೆ ಬಗ್ಗೆ ಉತ್ತರಿಸಿದ್ದ ಮೌರ್ಯ, ಉತ್ತರಪ್ರದೇಶದ ಸಿಎಂ ಆಯ್ಕೆಯ ಜವಾಬ್ದಾರಿ ನನ್ನದು, ಬೇರೆ ಯಾರು ಆಯ್ಕೆ ಮಾಡುತ್ತಾರೆ ಎಂದು ಖಾರವಾಗಿ ಉತ್ತರಿಸಿದ್ದರು. ಹೀಗಾಗಿ, ಸಿಎಂ ಆಯ್ಕೆ ಕುರಿತಂತೆ ಕೊಂಚ ಅಸಮಾಧಾನವಿರುವುದು ಕಂಡುಬರುತ್ತಿದೆ.
ಕೇಶವ್ ಪ್ರಸಾಧ್ ಮೌರ್ಯರ ಜೊತೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.