Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೇರಳ ಪ್ರವಾಹಕ್ಕೆ ತಮಿಳುನಾಡೇ ಕಾರಣ: ಕೇರಳ ಸರ್ಕಾರ

ಕೇರಳ ಪ್ರವಾಹಕ್ಕೆ ತಮಿಳುನಾಡೇ ಕಾರಣ: ಕೇರಳ ಸರ್ಕಾರ
ಬೆಂಗಳೂರು , ಗುರುವಾರ, 23 ಆಗಸ್ಟ್ 2018 (18:43 IST)
ಕೇರಳದಲ್ಲಿ ಸಂಭವಿಸಿದ ಪ್ರವಾಹ ಪ್ರಕೋಪದಲ್ಲಿ 373 ಜನ ಸಾವಿಗೀಡಾಗಿದ್ದು, ಕೇರಳದಲ್ಲಿ ಪ್ರವಾಹ ಉಂಟಾಗಲು ತಮಿಳುನಾಡು ಸರಕಾರವೇ ನೇರ ಹೊಣೆ ಎಂದು ಕೇರಳ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ.
ತಮಿಳುನಾಡಿನಲ್ಲಿರುವ ಮುಲ್ಲಾ ಪೆರಿಯಾರ್ ಡ್ಯಾಂನ ನೀರಿನ ಮಟ್ಟವನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿದರೂ ತಮಿಳುನಾಡು ಸರಕಾರ ಕಿವಿಗೊಡಲಿಲ್ಲ. ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದೆ.
 
ಮುಲ್ಲಾ ಪೆರಿಯಾರ್ ಡ್ಯಾಂ‌ನಿಂದ ಅಕಸ್ಮಿಕವಾಗಿ ನೀರು ಹೊರಬಿಟ್ಟಿರುವುದೇ ಕೇರಳದ ಪ್ರವಾಹ ಪ್ರಕೋಪಕ್ಕೆ ಮುಖ್ಯ ಕಾರಣವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನೇತೃತ್ವದ ಸರಕಾರ ಆರೋಪವನ್ನು ತಮಿಳುನಾಡು ಮೇಲೆ ಹೊರಿಸಿದೆ.
 
ಕೇರಳ ಸರಕಾರ ಮುಲ್ಲಾ ಪೆರಿಯಾರ್‌ ಡ್ಯಾಂ‌ನ ನೀರಿನ ಮಟ್ಟವನ್ನು 142 ಅಡಿಯಿಂದ 139 ಅಡಿವರೆಗೆ ಇಳಿಕೆಗೊಳಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ತಮಿಳುನಾಡು ಸರಕಾರ ಕ್ಯಾರೆ ಎನ್ನಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
 
ಮುಲ್ಲಾ ಪೆರಿಯಾರ್‌ ಆಣೆಕಟ್ಟು  ಕೇರಳ ಮತ್ತು ತಮಿಳುನಾಡು ರಾಜ್ಯಗಳ ರೈತರ ಪ್ರಮುಖ ಬೆನ್ನೆಲುಬಾಗಿದೆ. ಡ್ಯಾಂ ಕೇರಳದಲ್ಲಿದ್ದರೂ ಮೇಲ್ವಿಚಾರಣೆಯನ್ನು ತಮಿಳುನಾಡು ಸರಕಾರ ವಹಿಸಿಕೊಂಡಿದೆ. ಡ್ಯಾಂ‌ನ ಹಲವು ಭಾಗಗಳು ಬಿರುಕು ಬಿಟ್ಟಿದ್ದರಿಂದ ನೀರಿನ ಮಟ್ಟವನ್ನು ಕಡಿಮೆಗೊಳಿಸುವಂತೆ ಕೇರಳ ಸರಕಾರ ಹಲವು ವರ್ಷಗಳಿಂದ ಮನವಿ ಮಾಡುತ್ತಿದೆ.
 
ಇಡುಕ್ಕಿ ಪ್ರದೇಶದಲ್ಲಿ ಭಾರಿ ಮಳೆಯಾದ ಕಾರಣ ಡ್ಯಾಂ‌ ನೀರಿನ ಮಟ್ಟ 142 ಅಡಿಯ ಗಡಿ ದಾಟಿದ್ದರಿಂದ ನೀರು ಹರಿಬಿಡಲಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ಇಡುಕ್ಕಿ ಡ್ಯಾಂ‌ ನೀರು ಕೂಡಾ ಅದೇ ಸಮಯದಲ್ಲಿ ಹರಿಬಿಟ್ಟಿದ್ದರಿಂದ ಪ್ರವಾಹ ಪ್ರಕೋಪಕ್ಕೆ ಕಾರಣವಾಯಿತು ಎಂದು ಕೇರಳ ಸರಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕಣ್ಣೀರಿಟ್ಟ ಅಮಿತ್ ನ ತಾಯಿ, ಪತ್ನಿ