ತಿರುವನಂತಪುರಂ: ಅಮೆರಿಕಾ ವಿರುದ್ಧ ಕತ್ತಿ ಮಸೆಯುತ್ತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಂಗ್ ಉನ್ ರನ್ನು ಕೇರಳ ಸಿಎಂ ಪಿನರಾಯಿ ವಿಜಯನ್ ಹೊಗಳಿ ವಿವಾದಕ್ಕೀಡಾಗಿದ್ದಾರೆ.
ಎಡರಂಗದ ನೇತಾರರಾಗಿರುವ ಪಿನರಾಯಿ ವಿಜಯನ್ ಚೀನಾದಲ್ಲಿ ಆಡಳಿತದಲ್ಲಿರುವ ಎಡರಂಗಕ್ಕಿಂತಲೂ ಉತ್ತರ ಕೊರಿಯಾದ ಕಿಮ್ ಜಂಗ್ ಸರ್ಕಾರ ವಸಾಹತುಶಾಹಿ ಅಮೆರಿಕಾದ ವಿರುದ್ಧ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪಿನರಾಯಿ ವಿಜಯನ್ ಹೊಗಳಿದ್ದಾರೆ.
ಇತ್ತೀಚೆಗಷ್ಟೇ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಸಿಪಿಎಂ ಪಕ್ಷದ ಕಚೇರಿ ಎದುರು ಕಿಮ್ ಜಂಗ್ ಕಟೌಟ್ ಹಾಕಲಾಗಿತ್ತು. ಇದು ವಿವಾದಕ್ಕೆಡೆ ಮಾಡಿಕೊಡುತ್ತಿದ್ದಂತೆ ಆ ಬ್ಯಾನರ್ ಕಿತ್ತು ಹಾಕಲಾಗಿತ್ತು. ಇದೀಗ ಸ್ವತಃ ಸಿಎಂ ಪಿನರಾಯಿ ವಿಜಯನ್ ಉತ್ತರ ಕೊರಿಯಾ ಸರ್ವಾಧಿಕಾರಿಯ ಹೊಗಳಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ