ನವದೆಹಲಿ: ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಕೂಟದ ಜಮ್ಮು ಕಾಶ್ಮೀರ ಸರ್ಕಾರದ ಸಂಪುಟ ಪುನರಾಚನೆ ಬಳಿಕ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡ ಕವಿಂದರ್ ಗುಪ್ತಾ ಕತುವಾ ಅತ್ಯಾಚಾರ ಪ್ರಕರಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ಇದೊಂದು ಸಣ್ಣ ವಿಚಾರ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಿದೆ. ಆ ಹುಡುಗಿಗೆ ನ್ಯಾಯ ಸಿಗಬೇಕು. ನಾವು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಿದೆ. ಇಂತಹದ್ದಕ್ಕೆಲ್ಲಾ ಹೆಚ್ಚಿನ ಮನ್ನಣೆ ನೀಡಬಾರದು’ ಎಂದು ಕವಿಂದರ್ ಹೇಳಿದ್ದಾರೆ.
ಈಗಾಗಲೇ ಬಿಜೆಪಿ ಈ ಪ್ರಕರಣದಲ್ಲಿ ವಿಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ. ಅದರ ಬೆನ್ನಲ್ಲೇ ಜಮ್ಮು ಕಾಶ್ಮೀರದ ಉಪ ಮುಖ್ಯಮಂತ್ರಿಯಿಂದ ಇಂತಹದ್ದೊಂದು ಹೇಳಿಕೆ ಮತ್ತಷ್ಟು ವಿವಾದವೆಬ್ಬಿಸಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.