ಶ್ರೀನಗರ:ಜಮ್ಮು-ಕಾಶ್ಮೀರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಐದು ಮಂದಿ ಪೇದೆಗಳನ್ನು ಉಗ್ರರು ಹತ್ಯೆಗೈದ ಬಳಿಕ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಮೆಹಬೂಬು ಮುಫ್ತಿ ನೇತೃತ್ವದ ಸರ್ಕಾರ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಬುಲೆಟ್ ಪ್ರೂಫ್ ವಾಹನಗಳನ್ನು ಒದಗಿಸಿದ್ದಾರೆ.
ಸೂಕ್ಷ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ 20 ಸ್ಟೇಶನ್ ಹೌಸ್ ಆಫೀಸರ್ ಗಳಿಗೆ (ಎಸ್ಎಚ್ಓ) ಬುಲೆಟ್ ಪ್ರೂಫ್ ವಾಹನವನ್ನು ರಾಜ್ಯ ಸರ್ಕಾರ ಒದಗಿಸಿದೆ.
ಕಳೆದ ವಾರ ದಕ್ಷಿಣ ಕಾಶ್ಮೀರದ ಅಚಾಬಾಲ್ ಪ್ರದೇಶದಲ್ಲಿ ಎಸ್ಎಚ್ ಓ ಫಿರೋಜ್ ಅಹ್ಮದ್ ಸೇರಿದಂತೆ 6 ಮಂದಿ ಪೊಲೀಸರನ್ನು ಉಗ್ರರು ಹತ್ಯೆಗೈದಿದ್ದ ಘಟನೆ ಹಿನ್ನೆಲೆಯಲ್ಲಿ ಮುಫ್ತಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಆಕ್ಷೆಪಗಳು ಕೇಳಿ ಬಂದಿದ್ದವು.