Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎನ್‌ಕೌಂಟರ್: ಹೊಸ 2000 ರೂ ನೋಟುಗಳನ್ನು ಹೊಂದಿದ್ದ ಉಗ್ರರ ಹತ್ಯೆ

ಎನ್‌ಕೌಂಟರ್: ಹೊಸ 2000 ರೂ ನೋಟುಗಳನ್ನು ಹೊಂದಿದ್ದ ಉಗ್ರರ ಹತ್ಯೆ
ಕಾಶ್ಮಿರ , ಮಂಗಳವಾರ, 22 ನವೆಂಬರ್ 2016 (15:33 IST)
ಉತ್ತರ ಕಾಶ್ಮಿರದ ಬಂಡಿಪೋರಾ ಜಿಲ್ಲೆಯ ಹಂಜನ್ ಗ್ರಾಮದಲ್ಲಿ ಸೇನಾಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಉಗ್ರರಿಂದ 2000 ರೂ. ಹೊಸನೋಟುಗಳು ಪತ್ತೆಯಾಗಿರುವುದು ಆಘಾತ ಮೂಡಿಸಿದೆ.
 
ವರದಿಗಳ ಪ್ರಕಾರ, ಇಬ್ಬರು ಉಗ್ರರು ವಸತಿ ಪ್ರದೇಶದಲ್ಲಿ ಅಡಗಿದ್ದಾರೆ ಎನ್ನುವ ಮಾಹಿತಿ ಪಡೆದ ಸೇನಾಪಡೆಗಳು, ಸ್ಥಳವನ್ನು ಸುತ್ತುವರಿದು ಗುಂಡಿನ ದಾಳಿ ನಡೆಸಿದಾಗ ಇಬ್ಬರು ಉಗ್ರರು ಹತರಾಗಿದ್ದಾರೆ. ಉಗ್ರರಿಂದ ಎರಡು ಎಕೆ-47 ರೈಫಲ್‌ಗಳು ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾಮೂಲಗಳು ತಿಳಿಸಿವೆ.
 
ಉಗ್ರರ ಗುರುತು ಪತ್ತೆಯಾಗಿಲ್ಲವಾದರೂ ಲಷ್ಕರ್ -ಎ-ತೊಯಿಬಾ ಉಗ್ರಗಾಮಿ ಸಂಘಟನೆಗೆ ಸೇರಿದವರಾಗಿರಬಹುದು ಎಂದು ಶಂಕಿಸಲಾಗಿದೆ.
 
ಉಗ್ರರ ಬಳಿ 2000 ಮುಖಬೆಲೆಯ ಹೊಸ ನೋಟುಗಳು ಪತ್ತೆಯಾಗಿದ್ದರಿಂದ ಸ್ಥಳೀಯರು ಉಗ್ರರಿಗೆ ಹಣ ನೀಡಿರುವ ಸಾಧ್ಯತೆಗಳಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ 2000 ರೂ ನೋಟು ಹೊಂದಿದ್ದ ಆರೋಪಿಯ ಬಂಧನ