ಚೆನ್ನೈ: ತಮಿಳುನಾಡು ಮಾಜಿ ಸಿಎಂ ಕರುಣಾನಿಧಿ ಅಂತ್ಯಕ್ರಿಯೆಗೆ ಮರೀನಾ ಬೀಚ್ ಬಳಿ ಭೂಮಿ ಒದಗಿಸುವ ಸಂಬಂಧ ಉಂಟಾಗಿರುವ ವಿವಾದಕ್ಕೆ ಅಂತ್ಯ ಸಿಕ್ಕಿದೆ.
ಕರುಣಾನಿಧಿ ಅಂತ್ಯ ಸಂಸ್ಕಾರಕ್ಕೆ ಮರೀನಾ ಬೀಚ್ ಬಳಿ ಅವಕಾಶ ಸಿಕ್ಕದ ಕಾರಣ ಡಿಎಂಕೆ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹಂಗಾಮಿ ನ್ಯಾ. ರಮೇಶ್ ಈ ಬಗ್ಗೆ ತೀರ್ಪು ನೀಡಿದ್ದಾರೆ.
ಮರೀನಾ ಬೀಚ್ ನಲ್ಲೇ ಅಂತ್ಯಕ್ರಿಯೆ ನಡೆಸಲು ಹೈಕೋರ್ಟ್ ನ ದ್ವಿಸದಸ್ಯ ಪೀಠ ಒಪ್ಪಿಗೆ ನೀಡಿದೆ. ಇದರಿಂದಾಗಿ ಕರುಣಾನಿಧಿ ಅಂತ್ಯ ಕ್ರಿಯೆ ಬಗ್ಗೆ ಉಂಟಾಗಿದ್ದ ಗೊಂದಲ ನಿವಾರಣೆಯಾಗಿದೆ. ತೀರ್ಪು ಹೊರಬರುತ್ತಿದ್ದಂತೆ ಡಿಎಂಕೆ ಅಭಿಮಾನಿಗಳು ಕರುಣಾನಿಧಿ ಪರ ಘೋಷಣೆ ಕೂಗಿದರೆ, ಪುತ್ರ ಸ್ಟಾಲಿನ್ ಗದ್ಗದಿತರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.