Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಟ್ಕಳ ಮೂಲದ ಮೊಹಮ್ಮದ್ ಶಫಿ ಆರ್ಮರ್ ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಣೆ

ಭಟ್ಕಳ ಮೂಲದ ಮೊಹಮ್ಮದ್ ಶಫಿ ಆರ್ಮರ್ ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಣೆ
ಬೆಂಗಳೂರು , ಶುಕ್ರವಾರ, 16 ಜೂನ್ 2017 (10:18 IST)
ನವದೆಹಲಿ: ರಾಜ್ಯದ ಭಟ್ಕಳ ಮೂಲದ ಉಗ್ರ ಮೊಹಮ್ಮದ್ ಶಫಿ ಆರ್ಮರ್ ನನ್ನು ಅಮೆರಿಕ ಜಾಗತಿಕ ಉಗ್ರನೆಂದು ಘೋಷಿಸಿದೆ. ಈ ಮೂಲಕ ಆರ್ಮರ್ ಉಗ್ರ ಪಟ್ಟಿ ಸೇರಿದ ಮೊದಲ ಭಾರತೀಯ ಎನ್ನಿಸಿಕೊಂಡಿದ್ದಾನೆ.
 
ಅಮೆರಿಕದ ಹಣಕಾಸು ಸಚಿವಾಲಯ ಜಾಗತಿಕ ಉಗ್ರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ನೇಮಿಸುವ ಕೆಲಸ ಮಾಡುತ್ತಿದ್ದ  ಮಹಮ್ಮದ್ ಶಫಿ ಆರ್ಮರ್'ನನ್ನು ಸೇರ್ಪಡೆಗೊಳಿಸಿದೆ.  
 
ಭಾರತದಲ್ಲಿ ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತರ ವಿರುದ್ಧ ಕಾರ್ಯಾಚರಣೆಗಳು ನಡೆದ ಬಳಿಕ, ಆರ್ಮರ್ ತನ್ನ ಸಹೋದರನೊಂದಿಗೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. 
ಛೋಟೇ ಮುಲ್ಲಾ, ಅಂಜಾನ್ ಭಾಯ್ ಮತ್ತು ಯೂಸಫ್ ಅಲ್ ಹಿಂದಿ ಮತ್ತಿತರ ಹೆಸರುಗಳನ್ನು ಹೊಂದಿದ್ದ ಆರ್ಮರ್ ವಿರುದ್ಧ ಈ ಹಿಂದೆಯೇ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.  ಐಎಂ ಸಂಸ್ಥಾಪಕ ರಿಯಾಜ್ ಸೇರಿದಂತೆ ಭಟ್ಕಳ ಸಹೋದರರೊಂದಿಗೆ ಭಿನ್ನಮತದ ಬಳಿಕ, ಆರ್ಮರ್ ಅನ್ಸಾರ್ ಉಲ್ ತೌಹೀದ್ ಸಂಘಟನೆ ಹುಟ್ಟುಹಾಕಿದ್ದ. ಬಳಿಕ ಅದು ಇಸಿಸ್ ಉಗ್ರರಿಗೆ ನಿಷ್ಠೆ ತೋರಿತ್ತು. ತಂತ್ರಜ್ಞಾನದ ಜ್ಞಾನವಿರುವ ಆರ್ಮರ್ ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಭಾರತ, ಬಾಂಗ್ಲಾದೇಶ, ಶ್ರೀಲಂಕಾದ ಯುವಕರನ್ನು ಆಕರ್ಷಿಸಿ ಇಸಿಸ್'ಗೆ ಸೇರ್ಪಡೆಗೊಳಿಸುತ್ತಿದ್ದ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಚುನಾವಣೆ ಹಿನ್ನಲೆ: ವಿರೋದಿಗಳ ಭೇಟಿಗೆ ಮುಂದಾದ ಕೇಂದ್ರ ಸಚಿವರು