ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಆಪ್ ಸಹದ್ಯೋಗಿ, ಮಾಜಿ ಸಚಿವ ಕಪಿಲ್ ಮಿಶ್ರಾ ಆರೋಪ ಪ್ರತಿಕ್ರಿಯೆ ನೀಡಲು ಯೋಗ್ಯವಲ್ಲ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಇಂತಹ ಕೀಳುಮಟ್ಟದ ಆರೋಪಗಳಿಗೆ ಯಾವ ರೀತಿ ಉತ್ತರಿಸಲಿ?ಪ್ರತಿಕ್ರಿಯಿಸಲು ಕೂಡಾ ಯೋಗ್ಯವಲ್ಲ. ಇದೊಂದು ತೀರ ಕೇಳಮಟ್ಟದ ಆರೋಪ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀರು ಸರಬರಾಜು ಮತ್ತು ಬಿಲ್ ಪಾವತಿ ದುರಾಡಳಿತದಿಂದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಪಿಲ್ ಮಿಶ್ರಾನನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ್ದರು ಎಂದು ಸಿಸೋಡಿಯಾ ತಿಳಿಸಿದ್ದಾರೆ.
ನೀರು ಸಮಸ್ಯೆ ಕುರಿತಂತೆ ಬಹುತೇಕ ಶಾಸಕರು ಅಸಮಾಧಾನಗೊಂಡಿದ್ದರು. ಅನೇಕ ಶಾಸಕರು ಜನತೆಯ ಆಕ್ರೋಶ ಎದುರಿಸಬೇಕಾಗಿ ಬಂದಿತ್ತು. ನಿನ್ನೆ ಸಂಪುಟ ಪುನಾರಚನೆಯಾಗಲಿದೆ ಎಂದು ಮಿಶ್ರಾಗೆ ತಿಳಿಸಿದ್ದೆ. ಇದೀಗ ಇಂತಹ ಆರೋಪಗಳನ್ನು ಮಾಡುವವರಿಗೆ ಯಾವ ರೀತಿ ತಿಳಿಹೇಳಬೇಕು ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.