Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಎಪಿ ಭ್ರಷ್ಟಾಚಾರ ಬಯಲಿಗೆಳೆಯುತ್ತಲೇ ಕುಸಿದು ಬಿದ್ದ ಕಪಿಲ್ ಮಿಶ್ರಾ

ಎಎಪಿ ಭ್ರಷ್ಟಾಚಾರ ಬಯಲಿಗೆಳೆಯುತ್ತಲೇ ಕುಸಿದು ಬಿದ್ದ ಕಪಿಲ್ ಮಿಶ್ರಾ
NewDelhi , ಭಾನುವಾರ, 14 ಮೇ 2017 (13:02 IST)
ನವದೆಹಲಿ: ಎಎಪಿಯಿಂದ ಉಚ್ಛಾಟಿತವಾಗಿದ್ದ ಮಾಜಿ ಸಚಿವ ಕಪಿಲ್ ಮಿಶ್ರಾ ಪಕ್ಷದ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಎಎಪಿ ಭ್ರಷ್ಟಾಚಾರದ ಬಗ್ಗೆ ವಿವರಣೆ ನೀಡಿದ ಅವರು ಸ್ಥಳದಲ್ಲೇ ಕುಸಿದು ಬಿದ್ದ ಘಟನೆಯೂ ನಡೆದಿದೆ.

 
ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷ ಚುನಾವಣಾ ಆಯೋಗಕ್ಕೆ ತಪ್ಪು ಲೆಕ್ಕ ತೋರಿಸುತ್ತಿದೆ. ಅಸಲಿಗೆ 45 ಕೋಟಿ ಸಂಗ್ರಹವಾಗಿದ್ದರೂ ಪಕ್ಷದ ವೆಬ್ ಸೈಟ್ ನಲ್ಲಿ 19 ಕೋಟಿ ಲೆಕ್ಕ ತೋರಿಸುತ್ತಿದ್ದಾರೆ. ಹಲವು ಗುಪ್ತ ಸಂಸ್ಥೆಗಳಿಂದ ಎಎಪಿಗೆ ಹಣ ಸಂದಾಯವಾಗಿದೆ ಎಂದು ಅವರು ದೂರಿದ್ದಾರೆ.

ಅಲ್ಲದೆ ಕೇಜ್ರಿವಾಲ್ ಪಕ್ಷ ಭಾರೀ ಕಪ್ಪು ಹಣ ವ್ಯವಹಾರದಲ್ಲಿ ತೊಡಗಿದೆ ಎಂದು ಮಿಶ್ರಾ ಆರೋಪಿಸಿದ್ದಾರೆ. ಇದಕ್ಕೆಲ್ಲಾ ಕಡತಗಳ ದಾಖಲೆಯನ್ನೂ ನೀಡಿದ್ದಾರೆ. ಆದರೆ ಪತ್ರಿಕಾಗೋಷ್ಠಿಯಲ್ಲಿ ಎಎಪಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸುತ್ತಿರುವಾಗಲೇ ಅವರು ಕುಸಿದು ಬಿದ್ದ ಘಟನೆಯೂ ನಡೆದಿದೆ.

ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕಳೆದ ಐದು ದಿನಗಳಿಂದ ಅವರು ಎಎಪಿ ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೀಗಾಗಿ ನಿಶ್ಯಕ್ತಿಯಿಂದ ಕುಸಿದುಬಿದ್ದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಬಂಧನದ ವೇಳೆ ಪೊಲೀಸರ ಕಾಲು ಹಿಡಿದುಕೊಂಡು ಗೋಳಾಡಿದ್ದ ನಾಗ