ನವದೆಹಲಿ:ಪ್ರಮುಖ ರೈಲು ನಿಲ್ದಾಣಗಳನ್ನು ಪುನರ್ ನವೀಕರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪಿಪಿಪಿ ಯೋಜನೆಯಡಿ ಹರಾಜು ಹಾಕಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಾನ್ಪುರ ರೈಲ್ವೆ ಜಂಕ್ಷನ್ ಹಾಗೂ ಅಲಹಾಬಾದ್ ರೈಲ್ವೆ ಜಂಕ್ಷನ್ ನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ.
ಜೂ.28 ರಂದು ಉತ್ತರ ಪ್ರದೇಶದ ಎರಡು ರೈಲ್ವೆ ಜಂಕ್ಷನ್ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕಾನ್ಪುರ ರೈಲ್ವೆ ಜಂಕ್ಷನ್ ಗೆ 200 ಕೋಟಿ ಅಲಹಾಬಾದ್ ರೈಲ್ವೆ ಜಂಕ್ಷನ್ ಗೆ 150 ಕೋಟಿ ದರ ನಿಗದಿಪಡಿಸಲಾಗಿದೆ. ಜೂ.30 ರಂದು ಹರಾಜು ಪ್ರಕ್ರಿಯೆಯ ಫಲಿತಾಂಶ ಹೊರಬೀಳಲಿದೆ.
ಕೇಂದ್ರ ಸರ್ಕಾರ 25 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ನವೀಕರಣಗೊಳಿಸಲು ಉದ್ದೇಶಿಸಿದ್ದು, ಬೆಂಗಳೂರು, ಮುಂಬೈ ನ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣ, ಪುಣೆ, ಥಾಣೆ, ವಿಶಾಖಪಟ್ಟಣ, ಹೌರಾ, ಅಲ್ಲಾಹಾಬಾದ್, ಕಾಮಾಕ್ಯ, ಫರೀದಾಬಾದ್, ಜಮ್ಮು ತಾವಿ, ಬೆಂಗಳೂರು ಕಂಟೋನ್ಮೆಂಟ್, ಭೋಪಾಲ್, ಮುಂಬೈ ಕೇಂದ್ರ, ಇಂದೋರ್ ನ ನಿಲ್ದಾಣಗಳು ಪಟ್ಟಿಯಲ್ಲಿವೆ.
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..