ಸೇನೆಯ ಅಲ್ಪಾವಧಿ ನೇಮಕಾತಿ ಯೋಜನೆ ಅಗ್ನಿಪಥ್ ಯೋಜನೆಯನ್ನ ಕೇಂದ್ರ ಸರ್ಕಾರ ಘೋಷಿಸಿದ ಕೆಲವೇ ಹೊತ್ತಲ್ಲಿ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ನಟಿ ಕಂಗನಾ ರನೌತ್ ಯೋಜನೆಗೆ ತಮ್ಮ ಬೆಂಬಲವನ್ನ ಸೂಚಿಸಿದ್ದಾರೆ.
ಈ ಕುರಿತು ಕಂಗನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದು ಕೇಂದ್ರ ಸರ್ಕಾರದ ನೂತನ ಯೋಜನೆಯನ್ನ ಹಾಡಿ ಹೊಗಳಿದ್ದಾರೆ ಮತ್ತು ಬೇರೆ ದೇಶಗಳಲ್ಲಿ ಸೇನೆ ತರಬೇತಿ ಕಡ್ಡಾಯ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇಸ್ರೇಲ್ನಂತಹ ರಾಷ್ಟ್ರಗಳಲ್ಲಿ ಸೇನಾ ತರಬೇತಿಯನ್ನ ಅಲ್ಲಿನ ಯುವಕರಿಗೆ ಕಡ್ಡಾಯ ಮಾಡಲಾಗಿದೆ. ಸೇನೆಗೆ ಸೇರಿದರೆ ಜೀವನ ಪಾಠ, ಶಿಸ್ತು, ರಾಷ್ಟ್ರೀಯತೆ ಹಾಗು ಗಡಿ ಕಾಪಾಡುವುದನ್ನು ಕಲಿಯುತ್ತಾರೆ ಅಗ್ನಿಪಥ್ ಯೋಜನೆಯು ಇವೆಲ್ಲವನ್ನು ಸಾರಿ ಹೇಳುತ್ತದೆ ಎಂದು ಬರೆದು ಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ವಕ್ತಾರೆಯಾಗಿರುವ ಕಂಗನಾ ಅಗ್ನಿಪಥ್ ಯೋಜನೆಯನ್ನ ಗುರುಕಲ ಮಾದರಿಗೆ ಹೋಲಿಸಿದ್ದಾರೆ. ಆದರೆ, ಇಲ್ಲಿ ಯುವಕರಿಗೆ ಸಂಬಳವನ್ನ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಘಾತಕಾರಿಯಾಗಿ ಯುವ ಪೀಳಿಗೆ ಡ್ರಗ್ಸ್ ಹಾಗು ಪಬ್ ಜಿಗೆ ಅಡಿಕ್ಟ್ ಆಗಿದ್ದಾರೆ ಸರ್ಕಾರ ಇಂತಹ ಸುಧಾರಣೆಗಳನ್ನು ತಂದಿರುವುದಕ್ಕೆ ನಾನು ಶ್ಲಾಘಿಸುತ್ತೇನೆ ಎಂದಿದ್ದಾರೆ.