ಮಧ್ಯಪ್ರದೇಶ :ಇತ್ತೀಚಿಗಷ್ಟೇ ಮತ್ತೊಂದು ಹೆಣ್ಣು ಚಿರತೆ ಆಶಾ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಸತತವಾಗಿ ಚಿರತೆ ಮರಿಗಳು ಸಾವನ್ನಪ್ಪುತ್ತಿದ್ದ ಕಾರಣದಿಂದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆತಂಕ ನಿರ್ಮಣವಾಗಿತ್ತು. ಅತ್ಯಧಿಕ ಉಷ್ಣಾಂಶದ ವಾತಾವರಣವೇ ಚಿರತೆ ಮರಿಗಳ ಸಾವಿಗೆ ಕಾರಣ ಎಂದು ಬಳಿಕ ತಿಳಿದುಬಂದಿತ್ತು.
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದಿದ್ದ ಹೆಣ್ಣು ಚಿರತೆ ಜ್ವಾಲಾ ಮೂರು ಮರಿಗಳಿಗೆ ಜನ್ಮ ನೀಡಿದೆ. ಮರಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ಚಿರತೆಯ ನಿಗಾ ನೋಡುತ್ತಿರುವ ವೈದ್ಯಕೀಯ ತಂಡ ತಿಳಿಸಿದೆ.