Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಟಕಟೆಯಲ್ಲಿ ಶಶಿಕಲಾ: ಇಬ್ಬರು ನ್ಯಾಯಮೂರ್ತಿಗಳಿಂದ ಪ್ರತ್ಯೇಕ ತೀರ್ಪು

ಕಟಕಟೆಯಲ್ಲಿ ಶಶಿಕಲಾ: ಇಬ್ಬರು ನ್ಯಾಯಮೂರ್ತಿಗಳಿಂದ ಪ್ರತ್ಯೇಕ ತೀರ್ಪು
ನವದೆಹಲಿ , ಮಂಗಳವಾರ, 14 ಫೆಬ್ರವರಿ 2017 (09:59 IST)
ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ, ದಿವಂಗತ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಅವರ ರಾಜಕೀಯ ಭವಿಷ್ಯ ಇನ್ನು ಕೆಲವೇ ಕ್ಷಣಗಳಲ್ಲಿ ನಿರ್ಧಾರವಾಗಲಿದೆ. ಅವರನ್ನು ಸುತ್ತಿಕೊಂಡಿರುವ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಇಂದು ಮುಂಜಾನೆ 10.30 ಕ್ಕೆ ಪ್ರಕಟವಾಗಲಿದೆ. 
21 ವರ್ಷಗಳಷ್ಟು ಹಳೆಯ ಈ ಪ್ರಕರಣದ ತೀರ್ಪು ಸದ್ಯ ತಮಿಳುನಾಡಿನಲ್ಲಾಗುತ್ತಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. 
 
ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್ ಮತ್ತು ಅಮಿತವ್ ರಾಯ್  ಬೆಳಿಗ್ಗೆ 10.30ಕ್ಕೆ ಪ್ರತ್ಯೇಕವಾಗಿ ತೀರ್ಪನ್ನು ಪ್ರಕಟಿಸಲಿದ್ದಾರೆ. ಇಬ್ಬರ ತೀರ್ಪು ಒಂದೇ ಆಗಿಲ್ಲದಿದ್ದರೆ ಅದು ಶಶಿಕಲಾ ಪಾಲಿಗೆ ವರದಾನವೆನಿಸಿಕೊಳ್ಳಲಿದೆ. ಹೀಗಾಗಿದ್ದೇ ಆದರೆ ತ್ರಿಸದಸ್ಯ ಪೀಠ ಹೊಸದಾಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದೆ. 
 
ಎರಡು ಕಡೆಯಿಂದ ಶಶಿಕಲಾ ದೋಷಿ ಎಂಬ ತೀರ್ಪು ಪ್ರಕಟವಾದರೆ ಶಶಿಕಲಾ ಜೈಲುಪಾಲಾಗುವುದು ನಿಶ್ಚಿತ. ಶಿಕ್ಷೆ ಅವಧಿ ಪೂರ್ಣಗೊಂಡ ನಂತರ ಸಹ 6 ವರ್ಷಗಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. 
 
ಒಂದು ವೇಳೆ ಎರಡು ಕಡೆ ತೀರ್ಪು ಶಶಿಕಲಾ ಪರವಾಗಿ ಬಂದು ಅವರು ಖುಲಾಸೆಯಾದರೆ ಅವರ ರಾಜಕೀಯದ ಹಾದಿ ಸುಗಮವಾಗುತ್ತದೆ. ಮುಖ್ಯಮಂತ್ರಿಯಾಗಲು ಹೆಣಗಾಡುತ್ತಿರುವ ಅವರು ಬಹುಮತ ಸಾಬೀತು ಪಡಿಸಿ ಸಿಎಂ ಕುರ್ಚಿಯನ್ನು ಏರಬಹುದು. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬಾನಿಗೆಲ್ಲಾ ಹಬ್ಬ..!