Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇಂದು ಜೋಡೋ ಯಾತ್ರೆ ಪುನರಾರಂಭ

ಇಂದು ಜೋಡೋ ಯಾತ್ರೆ ಪುನರಾರಂಭ
ಲಕ್ನೋ , ಮಂಗಳವಾರ, 3 ಜನವರಿ 2023 (11:38 IST)
ಲಕ್ನೋ : ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶದಲ್ಲಿ 9 ದಿನಗಳ ಚಳಿಗಾಲದ ವಿರಾಮ ಪಡೆದು ಇಂದು ಮತ್ತೆ ಪುನರಾರಂಭವಾಗುತ್ತಿದೆ.

ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಜೋಡೋ ಯಾತ್ರೆ 110 ದಿಗಳಿಗಿಂತಲೂ ಹೆಚ್ಚು ಕಳೆದಿದ್ದು, ಸುಮಾರು 2,000 ಕಿ.ಮೀ ಕ್ರಮಿಸಿದೆ.

ದಕ್ಷಿಣದ ರಾಜ್ಯದಿಂದ ಪ್ರಾರಂಭವಾದ ಪಾದಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಹೊರಟು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಸಂಚರಿಸಿದೆ.

ಯಾತ್ರೆ ಜಮ್ಮು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಇದು ಭಾರತದ ಇತಿಹಾಸದಲ್ಲೇ ಯಾವುದೇ ಭಾರತೀಯ ರಾಜಕಾರಣಿ ನಡೆಸಿರುವ ಅತಿ ಉದ್ದದ ಮೆರವಣಿಗೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಜನವರಿ 26 ರಂದು ಯಾತ್ರೆ ಶ್ರೀನಗರ ತಲುಪಲಿದ್ದು, ಅಲ್ಲಿ ಕೊನೆಗೊಳ್ಳಲಿದೆ.

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಕೊನೆಗೊಳಿಸಿದ ಬಳಿಕ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಗುರಿಯನ್ನು ರಾಹುಲ್ ಗಾಂಧಿ ಹೊಂದಿದ್ದಾರೆ. ದೇಶಾದ್ಯಂತ ಯಾತ್ರೆಯ ಸಂದೇಶವನ್ನು ಹರಡುವ ಉದ್ದೇಶದಿಂದ ‘ಹಾಥ್ ಸೆ ಹಾಥ್ ಜೋಡೋ’ ಅಭಿಯಾನವನ್ನು ಪ್ರಾರಂಭಿಸಲು ಕಾಂಗ್ರೆಸ್ ಯೋಜಿಸಿದೆ. 

ಮೂಲಗಳ ಪ್ರಕಾರ ರಾಹುಲ್ ಸಹೋದರಿ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ದೇಶಾದ್ಯಂತ ‘ಹಾಥ್ ಸೆ ಹಾಥ್ ಜೋಡೋ’ ಅಭಿಯಾನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಮುಖ್ಯವಾಗಿ ಮಹಿಳೆಯರನ್ನು ಕೇಂದ್ರೀಕರಿಸುವುದು ಇದರ ಉದ್ದೇಶವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡದಲ್ಲೇ ಟ್ವೀಟ್‌ ಮಾಡಿ ಪ್ರಧಾನಿ ಮೋದಿ ಶ್ರೀಗಳಿಗೆ ಸಂತಾಪ