ಅನುಮತಿ ಪಡೆಯದೇ ತಮ್ಮ ಜಾಹೀರಾತುಗಳಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಫೋಟೋ ಬಳಸಿದ್ದ ಪೇಟಿಎಂ ಮತ್ತು ಜಿಯೋ ಸಂಸ್ಥೆಗಳು ಬೇಷರತ್ ಕ್ಷಮೆಯಾಚಿಸಿವೆ ಎಂದು ಕೇಂದ್ರ ಸರ್ಕಾರವಿಂದು ಸಂಸತ್ತಿಗೆ ಮಾಹಿತಿ ನೀಡಿದೆ.
ನೋಟ್ ಬ್ಯಾನ್ ಬಳಿಕ ಪೇಟಿಎಂ ಕಂಪನಿ ತನ್ನ ವಾಣಿಜ್ಯ ಜಾಹೀರಾತುಗಳಲ್ಲಿ ಮತ್ತು ಜಿಯೋ ಸಂಸ್ಥೆ ಆರಂಭವಾದಾಗ ತನ್ನ ಡಿಜಿಟಲ್ ಲೈಫ್ ಜಾಹೀರಾತಿನಲ್ಲಿ ಮೋದಿ ಫೋಟೋವನ್ನ ಬಳಸಿತ್ತು.
ಈ ಸಂಬಂಧ, ಗ್ರಾಹಕ ವ್ಯವಹಾರಗಳ ಇಲಾಖೆ ವಿವರಣೆ ಕೇಳಿ 1950ರ ಲಾಂಛನ ಮತ್ತು ಹೆಸರು ಬಳಕೆ ಕಾಯ್ದೆಯಡಿ ಎರಡೂ ಕಂಪನಿಗಳಿಗೆ ನೊಟಿಸ್ ಜಾರಿ ಮಾಡಿತ್ತು.