ಕಾಮುಕರ ಹೀನ ಕೃತ್ಯಗಳಿಗೆ ಅಂತ್ಯವಿಲ್ಲದಂತಾಗಿದೆ. ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯ ಕಣ್ಣುಗಳನ್ನು ಕಿತ್ತುಹಾಕಿ ಕೈಗಳನ್ನು ಕತ್ತರಿಸಿ ಹಾಕಿದ ಹೇಯ ಘಟನೆ ವರದಿಯಾಗಿದೆ.
ಮಾಟ ಮಂತ್ರ ಮಾಡುವ ಆರೋಪಿಗಳು ಬಾಲಕಿಯನ್ನು ಅತ್ಯಾಚಾರವೆಸಗಿ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪೂರ್ವ ಸಿಂಗ್ಭೂಮಿ ಜಿಲ್ಲೆಯ ಗ್ರಾಮವೊಂದರಿಂದ ಡಿಸೆಂಬರ್ 15 ರಂದು ಕಾಣೆಯಾಗಿದ್ದ ಬಾಲಕಿ ನಂತರ ಮನೆಗೆ ಮರಳಿರಲಿಲ್ಲ. ಬಾಲಕಿಯ ಕೊಳೆತ ಶವದ ಸ್ಥಿತಿ ನೋಡಿ ಇದನ್ನು ಮಾಂತ್ರಿಕರೆ ಮಾಡಿರಬಹುದು ಎಂದು ಗ್ರಾಮಸ್ಥರು ಅನುಮಾನಿಸಿದ್ದಾರೆ.
ಆದರೆ, ಪೊಲೀಸರು ಕುಟುಂಬದ ಸದಸ್ಯರು ಅಥವಾ ಬಾಲಕಿಗೆ ಪರಿಚಯವಿರುವವರೇ ಇಂತಹ ಕೃತ್ಯ ಎಸಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಅಂಗಾಂಗ ಕಳ್ಳಸಾಗಾಣೆ ಗ್ಯಾಂಗ್ಗಳ ಕೈವಾಡವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ, ಬಾಲಕಿಯ ಶವದ ಪೋಸ್ಟ್ಮಾರ್ಟಂನಲ್ಲಿ ಕಿಡ್ನಿ ಕಾಣೆಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜಾರ್ಖಂಡ್ನಲ್ಲಿ ಡಿಸೆಂಬರ್ 16 ರಂದು ಕಾಣೆಯಾಗಿದ್ದ 19 ವರ್ಷದ ಯುವತಿಯೊಬ್ಬಳು, ನಂತರ ಶವವಾಗಿ ಪತ್ತೆಯಾಗಿದ್ದಳು. ವಾರದಲ್ಲಿಯೇ ಎರಡು ಹತ್ಯೆಗಳಾಗಿರುವುದು ಪೊಲೀಸರ ನಿದ್ದೆಗೆಡಿಸಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾದ ಸಂಸದ ಸಜೀವ್ ಕುಮಾರ್ ಮತ್ತು ಶಾಸಕ ಅಮಿತ್ ಮಹತೋ, ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಡ ಹೇರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.