Webdunia - Bharat's app for daily news and videos

Install App

ಜಯಲಲಿತಾ ಸೋದರಸೊಸೆಯಿಂದ ಎಂಜಿಆರ್-ಅಮ್ಮಾ-ದೀಪಾ ಫೋರಂ ಹೊಸ ಪಕ್ಷ ಘೋಷಣೆ

Webdunia
ಶುಕ್ರವಾರ, 24 ಫೆಬ್ರವರಿ 2017 (18:35 IST)
ತಮಿಳುನಾಡಿನ ರಾಜಕೀಯದಲ್ಲಿ ಇಂದು ಹೊಸ ಪರ್ವ ಆರಂಭವಾಗಿದೆ. ಈ ಹಿಂದೆ ಘೋಷಿಸಿದಂತೆ  ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಇಂದು ಎಂಜಿಆರ್-ಅಮ್ಮಾ-ದೀಪಾ ಫೋರಂ ಎನ್ನುವ ಹೊಸ ಪಕ್ಷಕ್ಕೆ ಚಾಲನೆ ನೀಡಿದ್ದಾರೆ.
ನಗರದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ದಿವಂಗತ ಜಯಲಲಿತಾ ನಿಧನದಿಂದ ತೆರವಾದ ಆರ್‌.ಕೆ.ನಗರ ಕ್ಷೇತ್ರದಿಂದ ವಿಧಾನಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
 
ಮುಂಬರುವ ದಿನಗಳಲ್ಲಿ ಅಮ್ಮಾ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಅಮ್ಮನಿಗಾಗಿ ತಮಿಳುನಾಡಿನಲ್ಲಿ ಸೇವೆ ಸಲ್ಲಿಸಲು ಸಿದ್ದಳಿದ್ದೇನೆ ಎಂದು ಘೋಷಿಸಿದ್ದಾರೆ.
 
ಎಂಜಿಆರ್-ಅಮ್ಮಾ-ದೀಪಾ ಫೋರಂ ಮುಂಬರುವ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ಪರಿವರ್ತನೆಯಾಗಲಿದೆ. ಹೊಸ ಪಕ್ಷ ಕಟ್ಟುವಲ್ಲಿ ಸಹೋದರ ದೀಪಕ್ ಕೂಡಾ ನೆರವಾಗುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು..
 
ಜಯಾ ಜನ್ಮದಿನದಂದು ತಾವು ಹೊಸ ಪಕ್ಷವನ್ನು ಘೋಷಿಸುವುದಾಗಿ ಹೇಳಿದ್ದ ದೀಪಾ ತಮ್ಮ ನಿವಾಸದಲ್ಲಿ ಪಕ್ಷದ ಕಚೇರಿಯನ್ನು ಆರಂಭಿಸಿದ್ದು ಪಕ್ಷದ ಹೆಸರು ಮತ್ತು ಧ್ವಜವನ್ನು ಬಹಿರಂಗಪಡಿಸಿದ್ದಾರೆ. 
 
ಜಯಾ ನಿಧನರಾಗುತ್ತಿದ್ದಂತೆ ರಾಜಕೀಯ ಪ್ರವೇಶಿಸಲು ಸಿದ್ಧರಾದ ಜಯಲಲಿತಾ ಸೋದರನ ಮಗಳು ದೀಪಾ ಜಯಕುಮಾರ್ ಚೆನ್ನೈನ ಮರೀನಾ ಬೀಚ್ ನಲ್ಲಿ ಜನವರಿ 17ರಂದು ನಡೆದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರ 100ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ಘೋಷಿಸಿದ್ದರು.
 
ನನ್ನ ಮುಂದೆ ಎರಡು ಆಯ್ಕೆಗಳಿವೆ ಎಐಎಡಿಎಂಕೆ ಸೇರುವುದು ಅಥವಾ ಹೊಸ ಪಕ್ಷ ಕಟ್ಟುವುದು. ನಾನು ಈ ಬಗ್ಗೆ ನನ್ನ ಬೆಂಬಲಿಗರ ಜತೆ ಚರ್ಚೆ ಮಾಡಿ ನಿರ್ಧಾ ಕೈಗೊಳ್ಳುತ್ತೇನೆ. ಅಮ್ಮ ಜಯಲಲಿತಾ ಅವರ ಹುಟ್ಟುಹಬ್ಬದ ದಿನ(ಫೆ.24)ದಂದು ಈ ಬಗ್ಗೆ ನಿರ್ಣಯ ಪ್ರಕಟಿಸುತ್ತೇನೆ ಎಂದು ದೀಪಾ ಹೇಳಿದ್ದರು.
 
ಜಯಲಲಿತಾರನ್ನೇ ಹೋಲುವ 42 ವರ್ಷದ ದೀಪಾ ಸೋದರತ್ತೆ ಜಯಲಲಿತಾರನ್ನೇ ಹೋಲುವ 42 ವರ್ಷದ ದೀಪಾರ ಅವರಲ್ಲಿ ನಾವು ಕಳೆದುಕೊಂಡ ಅಮ್ಮನನ್ನು ಕಾಣುತ್ತೇವೆ ಎಂದು ಅಭಿಮಾನಿಗಳು ಹೇಳುತ್ತಿರುವುದು ದೀಪಾ ರಾಜಕೀಯ ಮಹಾತ್ವಾಕಾಂಕ್ಷೆಗೆ ಇಂಬು ನೀಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments