Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಯಲಲಿತಾ ಸಮಸ್ತ ಆಸ್ತಿಗೆ ನಾವೇ ವಾರಸುದಾರರು: ದೀಪಕ್ ಜಯಕುಮಾರ್

ಜಯಲಲಿತಾ ಸಮಸ್ತ ಆಸ್ತಿಗೆ ನಾವೇ ವಾರಸುದಾರರು: ದೀಪಕ್ ಜಯಕುಮಾರ್
ಚೆನ್ನೈ , ಶುಕ್ರವಾರ, 24 ಫೆಬ್ರವರಿ 2017 (16:10 IST)
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ತಮಿಳುನಾಡಿನ ಮುಖ್ಯಮಂತ್ರಿಯಾಗುವುದನ್ನು ಯಾವತ್ತೂ ಜನತೆ ಸಹಿಸುವುದಿಲ್ಲ. ಜಯಲಲಿತಾಗೆ ಸೇರಿದ ಆಸ್ತಿಗೆ ನಾವೇ ಹಕ್ಕುದಾರರು ಎಂದು ಸೋದರಳಿಯ ದೀಪಕ್ ಜಯಕುಮಾರ್ ಹೇಳಿದ್ದಾರೆ. 
 
ರುವ ಅವರ ವೇದ ನಿಲಯಂ ನಿವಾಸ ಸೇರಿದಂತೆ ಇತರ ಸಮಸ್ತ ಆಸ್ತಿಯನ್ನು ಜಯಲಲಿತಾ ಅವರು ದೀಪಾ ಮತ್ತು ನನ್ನ ಹೆಸರಿಗೆ ವಿಲ್ ಬರೆದಿದ್ದಾರೆ ಎಂದು ತಿಳಿಸಿದ್ದಾರೆ. 
 
ಶಶಿಕಲಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗುವುದು ತಮಿಳುನಾಡು ಜನತೆಗೆ ಸ್ವೀಕಾರ್ಹವಲ್ಲ. ಶಶಿಕಲಾ ಸಹೋದರ ಟಿಟಿವಿ ದಿನಕರನ್ ಅವರನ್ನು ಎಐಎಡಿಎಂಕೆ ಉಪಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಕೂಡಾ ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಶಶಿಕಲಾ ಮತ್ತು ಅವರ ಕುಟುಂಬದ ಸದಸ್ಯರು ಎಐಎಡಿಎಂಕೆ ಪಕ್ಷದಲ್ಲಿ ಕುಟುಂಬ ಅಡಳಿತವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಪಕ್ಷದ ಮುಖಂಡರಿಗೆ ಕೂಡಾ ಶಶಿಕಲಾ ಸಹೋದರರು ಪಕ್ಷಕ್ಕೆ ಸೇರ್ಪಡೆಯಾಗುವುದು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.
 
ಶಶಿಕಲಾ ಅವರ ವರ್ತನೆಯಿಂದ ಎಐಎಡಿಎಂಕೆ ಪಕ್ಷ ವಿಭಜನೆಯಾಗುವಂತಹ ಸ್ಥಿತಿ ಎದುರಾಗಿದ್ದು, ಇದೇ ರೀತಿ ಮುಂದುವರಿದಲ್ಲಿ ಸಾಂಪ್ರದಾಯಿಕ ಎದುರಾಳಿ ಪಕ್ಷವಾದ ಡಿಎಂಕೆ ರಾಜ್ಯದಲ್ಲಿ ಸರಕಾರ ರಚಿಸಲು ಸುಲಭವಾಗುತ್ತದೆ ಎಂದು ಜಯಲಲಿತಾ ಸೋದರಳಿಯ ದೀಪಕ್ ಜಯಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಜಯಲಲಿತಾಗೆ 69ನೇ ಜನ್ಮದಿನ: ಸಮಾಧಿಗೆ ಭೇಟಿ ನೀಡಿದ ಗಣ್ಯಾತಿಗಣ್ಯರು