ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಕ್ರೀಡೆಯನ್ನು ಕಾನೂನುಬದ್ಧಗೊಳಿಸಿರುವುದನ್ನು ಪ್ರಶ್ನಿಸಿ ಪೇಟಾ ಸಂಸ್ಥೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ವನ್ಯಜೀವಿ ಕಲ್ಯಾಣ ಮಂಡಳಿ, ಪೇಟಾ ಮತ್ತು ಇತರೆ ಸಂಘಟನೆಗಳು ಸರ್ಕಾರದ ಈ ನಡೆಯ ಕುರಿತು ಪ್ರಶ್ನೆ ಎತ್ತಿದ್ದು ಜನವರಿ 30 ರಂದು ಸುಪ್ರೀಂ ಈ ಎಲ್ಲ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಿದೆ.
ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಿಷೇಧ ಸಂಬಂಧ ಸುಪ್ರೀಂಗೆ ಈವರೆಗೂ ಸುಮಾರು 70 ಕೇವಿಯಟ್ ಅರ್ಜಿಗಳು ಸಲ್ಲಿಕೆಯಾಗಿವೆ.
ಜಲ್ಲಿಕಟ್ಟು ಕ್ರೀಡೆ ಮೇಲೆ ಸುಪ್ರೀಂ ಹೇರಿದ್ದ ನಿಷೇಧವನ್ನು ಸಂಪೂರ್ಣ ತೆರವುಗೊಳಿಸಬೇಕೆಂಬ ತಮಿಳುನಾಡಿನ ಜನತೆಯ ಕ್ರಾಂತಿಕಾರಕ ಹೋರಾಟ ನಡೆಸಿತ್ತು. ಜನರನ್ನು ತಣ್ಣಗಾಗಿಸಲು ಕೇಂದ್ರದ ಮೂಲಕ ಸುಗ್ರಿವಾಜ್ಞೆ ಹೊರಡಿಸಿದ್ದ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಆಚರಣೆಗೆ ಅನುವು ಮಾಡಿಕೊಟ್ಟಿತ್ತು. ಆದರೆ ಅದಕ್ಕೆ ತೃಪ್ತರಾಗದ ಜನರು ಹೋರಾಟವನ್ನು ಮುಂದುವರೆಸಿದಾಗ ವಿಧಾನಸಭೆಯಲ್ಲಿ ಮಸೂದೆಯನ್ನು ಮಂಡಿಸಿ ಜಲ್ಲಿಕಟ್ಟನ್ನು ಕಾನೂನುಬದ್ಧಗೊಳಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.