ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮನೆ ಆವರಣದಲ್ಲಿ ಜಿಲೆಟಿನ್ ಸ್ಪೋಟಕಗಳನ್ನು ತಂದಿಟ್ಟಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಈ ದುಷ್ಕೃತ್ಯವೆಸಗಿದ್ದು ನಾವು ಎಂದು ಜೈಷ್ ಉಲ್ ಹಿಂದ್ ಸಂಘಟನೆ ಹೇಳಿಕೊಂಡಿದೆ.
ಇದು ಸ್ಯಾಂಪಲ್ ಅಷ್ಟೇ. ಮುಂದೆ ದೊಡ್ಡ ಮಟ್ಟಿನ ಸ್ಪೋಟ ನಡೆಸುತ್ತೇವೆ ಎಂದು ಉಗ್ರರು ಬೆದರಿಕೆ ಪತ್ರವನ್ನೂ ಇಟ್ಟಿದ್ದರು. ಎಸ್ ಯುವಿ ಕಾರಿನಲ್ಲಿ ಸ್ಪೋಟಕವಿಟ್ಟು ಅಂಬಾನಿ ಮನೆ ಹೊರಗೆ ನಿಲುಗಡೆ ಮಾಡಲಾಗಿತ್ತು. ಇದನ್ನು ತಂದಿಟ್ಟವರು ಯಾರು ಎಂದು ಪ್ರಶ್ನೆ ಮೂಡಿತ್ತು. ಇದೀಗ ಜೈಷ್ ಸಂಘಟನೆ ಟೆಲಿಗ್ರಾಂ ಆಪ್ ಮೂಲಕ ಇದನ್ನು ಮಾಡಿರುವುದು ತಾವೇ ಎಂದು ಹೇಳಿಕೊಂಡಿದೆ. ಅಲ್ಲದೆ, ಸಾಧ್ಯವಾದರೆ ನಮ್ಮನ್ನು ತಡೆಯಿರಿ ಎಂದೂ ಸವಾಲು ಹಾಕಿದೆ.