Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಂದೆ-ತಾಯಿ ಬೇರಾಗಿದ್ದನ್ನು ಹೇಳಿಕೊಳ್ಳೋಕೆ 40 ವರ್ಷ ಬೇಕಾಯ್ತು : ಸ್ಮೃತಿ ಇರಾನಿ

ತಂದೆ-ತಾಯಿ ಬೇರಾಗಿದ್ದನ್ನು ಹೇಳಿಕೊಳ್ಳೋಕೆ 40 ವರ್ಷ ಬೇಕಾಯ್ತು : ಸ್ಮೃತಿ ಇರಾನಿ
ನವದೆಹಲಿ , ಶುಕ್ರವಾರ, 31 ಮಾರ್ಚ್ 2023 (11:47 IST)
ನವದೆಹಲಿ : ಕೇಂದ್ರ ಸಚಿವೆ ಹಾಗೂ ನಟಿ ಸ್ಮೃತಿ ಇರಾನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಕಷ್ಟ ಹಾಗೂ ತಂದೆ-ತಾಯಿ ಪರಸ್ಪರ ಬೇರ್ಪಟ್ಟ ಬಗ್ಗೆ ಮಾತನಾಡಿದ್ದಾರೆ.
 
ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಪರ ಹಾಗೂ ವೈಯಕ್ತಿಕ ಜೀವನದ ಬಗ್ಗೆಯ ಹಲವು ಕಷ್ಟದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ತಂದೆ- ತಾಯಿಯ ಪರಸ್ಪರ ಬೇರಾಗಿದ್ದನ್ನು ಕುರಿತು ಮಾತನಾಡಲು ನನಗೆ 40 ವರ್ಷಗಳು ಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

ಸ್ಮೃತಿ ಇರಾನಿಯವರ ತಂದೆ ಪಂಜಾಬಿ ಖಾತ್ರಿಯಾಗಿದ್ದರೆ, ತಾಯಿ ಬಂಗಾಳಿ-ಬ್ರಾಹ್ಮಣರಾಗಿದ್ದರು. ಇಬ್ಬರೂ ತಮ್ಮ ಪೋಷಕರ ವಿರೋಧದ ನಡುವೆ ಮದುವೆ ಆಗಿದ್ದರು. ಅವರು ಮದುವೆಯಾದಾಗ ಅವರ ಬಳಿ ಕೇವಲ 150 ರೂ. ಇತ್ತು. ಅದಕ್ಕಾಗಿ ಅವರು ದನದ ಕೊಟ್ಟಿಗೆಯಲ್ಲಿನ ಅಟ್ಟದ ಮೇಲೆ ವಾಸಿಸುತ್ತಿದ್ದರು.

ಆ ವೇಳೆ ನಾನು ಲೇಡಿ ಹಾರ್ಡಿಂಜ್ ಆಸ್ಪತ್ರೆಯಲ್ಲಿ ಜನಿಸಿದೆ. ನಂತರ ಅವರು ಆರ್ಥಿಕ ಸಮಸ್ಯೆಯಿಂದಾಗಿ ಗುರುಗ್ರಾಮಕ್ಕೆ ಸ್ಥಳಾಂತರಗೊಂಡರು. ಆದರೆ ಅಲ್ಲಿ ಕೆಲವೇ ಕೆಲವು ದಂಪತಿ ಆರ್ಥಿಕ ಮತ್ತು ಸಾಮಾಜಿಕ ಘರ್ಷಣೆಯ ನಿರ್ಬಂಧಗಳನ್ನು ಬದುಕಬಲ್ಲರು ಎಂದು ನೆನಪಿಸಿಕೊಂಡರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಮನವಮಿ ಆಚರಣೆ ವೇಳೆ ದೇವಾಲಯದ ನೆಲ ಕುಸಿತ !