Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇದು ಸುಳ್ಳು: ರಾಜ್ಯಪಾಲರಿಗೆ ಶಶಿಕಲಾ ಆತ್ಮಹತ್ಯೆ ಬೆದರಿಕೆ ಪತ್ರ

ಇದು ಸುಳ್ಳು: ರಾಜ್ಯಪಾಲರಿಗೆ ಶಶಿಕಲಾ ಆತ್ಮಹತ್ಯೆ ಬೆದರಿಕೆ ಪತ್ರ
ಚೆನ್ನೈ , ಸೋಮವಾರ, 13 ಫೆಬ್ರವರಿ 2017 (07:26 IST)
ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಬರೆದಿರುವುದೆನ್ನಲಾದ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿರುವ ಆತ್ಮಹತ್ಯಾ ಬೆದರಿಕೆ ಪತ್ರ ನಕಲಿ ಎಂದು ತಿಳಿದುಬಂದಿದೆ. ಈ ಪತ್ರದಲ್ಲಿ ರಾಜ್ಯಪಾಲರು ತಕ್ಷಣಕ್ಕೆ ಸರ್ಕಾರ ರಚಿಸಲು ಆಹ್ವಾನಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಲಾಗಿದೆ.
 
ಎಐಡಿಎಂಕೆ ಅಧಿಕೃತ ಲೆಟರ್ ಪ್ಯಾಡ್‌ನಲ್ಲಿರುವಂತೆ ಕಂಡುಬಂದಿರುವ ಈ ಪತ್ರ ವಿ.ಕೆ ಶಶಿಕಲಾ ಹೆಸರಲ್ಲಿದ್ದು, ರಾಜ್ಯಪಾಲರಿಗೆ ಸಂಬೋಧಿಸಿ ಬರೆಯಲಾಗಿದೆ.
 
ಪತ್ರದ ಒಕ್ಕಣಿಕೆ ಹೀಗಿದೆ: ಸರ್ ನನ್ನನ್ನು ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸುವಂತೆ ಆಹ್ವಾನಿಸಲು ನೀವು ವಿಳಂಬ ಮಾಡುತ್ತಿರುವಿರಿ. ಪರಿಣಾಮ ನಾನು ಬಂಧಿಸಿಟ್ಟಿರುವ ಶಾಸಕರು ಒಬ್ಬೊಬ್ಬರಾಗಿ ಒ.ಪನ್ನೀರ್ ಸೆಲ್ವಂ ಪಾಳಯಕ್ಕೆ ಸೇರಿಕೊಳ್ಳುತ್ತಿದ್ದಾರೆ. ನನ್ನ ತಾಳ್ಮೆಗೂ ಒಂದು ಮಿತಿ ಇದೆ. ನೀವು ಮತ್ತೂ ಹೆಚ್ಚು ಸಮಯವನ್ನು ತೆಗೆದುಕೊಂಡರೆ ನಾನು ಸಾವಿಗೆ ಶರಣಾಗುತ್ತೇನೆ ಮತ್ತು ನನ್ನ ನಡೆಗೆ ನೀವೇ ಜವಾಬ್ದಾರರು ಎಂದು ಬರೆದಿಡುತ್ತೇನೆ.
 
ಮತ್ತೀಗ ಈ ಪತ್ರವನ್ನು ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಿ ಸ್ಪಷ್ಟನೆ ನೀಡಿರುವ ಎಐಡಿಎಂಕೆ, ಇದು ಶಶಿಕಲಾ ಬರೆದಿರುವ ಪತ್ರವಲ್ಲ ಎಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮನ ಹೆಸರಲ್ಲಿ ದೀಪಾ ಜಯಕುಮಾರ್ ಹೊಸ ಪಕ್ಷ