ಹರಿಯಾಣ: ಮದುವೆಗೆ ಅಡ್ಡಿಯಾಗಬಾರದೆಂದು ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿ ಎಂದ ವಧುವಿನ ಸಂಬಂಧಿಕನಿಗೆ ವರನ ಕಡೆಯವರು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ.
ವಿಕಾಸ್ ಕೊಲೆಯಾದ ದುರ್ದೈವಿ. ವರನ ಸಂಬಂಧಿಕ ಸಂಜಯ್ ಕೊಲೆ ಮಾಡಿದ ಆರೋಪಿ. ಮದುವೆಯ ಸಂದರ್ಭದಲ್ಲಿ ವರನನ್ನು ಮೆರವಣಿಗೆಯ ಮೂಲಕ ನೃತ್ಯ ಮಾಡುತ್ತಾ ಕರೆದುಕೊಂಡ ಹೋದ ವರನ ಕಡೆಯವರು ಮದುವೆ ಮಂಟಪಕ್ಕೆ ಬಂದು ರಾತ್ರಿ 10 ಗಂಟೆಯಾದರೂ ಅವರು ಡ್ಯಾನ್ಸ್ ಮಾಡುತ್ತಲೇ ಇದ್ದರು.
ಹೀಗೆ ಮಾಡಿದರೆ ಮದುವೆಗೆ ತೊಂದರೆಯಾಗುತ್ತದೆ ಎಂದು ವಧುವಿನ ಕಡೆಯವರಾದ ವಿಕಾಸ್ ವರನ ಸಂಬಂಧಿಕರಲ್ಲಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಕೋಪಗೊಂಡ ವರನ ಕಡೆಯವರು ವಧುವಿನ ಕುಟುಂಬಸ್ಥರಲ್ಲಿ ಜಗಳವಾಡಿದ್ದಾರೆ. ಈ ಜಗಳ ವಿಕೋಪಕ್ಕೆ ತಿರುಗಿ ವರನ ಸಂಬಂಧಿಕ ಸಂಜಯ್, ವಿಕಾಸ್‍ಗೆ ಚಾಕುಯಿಂದ ಇರಿದಿದ್ದಾನೆ. ಪರಿಣಾಮ ವಿಕಾಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಸಂಜಯ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.