ಬೆಳ್ಳಂ ಬೆಳಗ್ಗೆ ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್`ಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಸಚಿವರ ಸದಾಶಿವನಗರದ ನಿವಾಸ ಮತ್ತು ಕನಕಪುರದ ನಿವಾಸದಲ್ಲೂ ದಾಳಿ ನಡೆದಿದೆ. ಬೆಳಗ್ಗೆ 7 ಗಂಟೆಗೆ ದಾಳಿ ನಡೆಸಿರುವ ತಲಾ 20 ಅಧಿಕಾರಿಗಳ ತಂಡ ದಾಖಲೆ ಪತ್ರಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತ, ಡಿಕೆಶಿ ಸಹೋದರ ಸಂಸದ ಡಿ.ಕೆ. ಸುರೇಶ್ ನಿವಾಸದ ಮೇಲೂ ದಾಳಿ ನಡೆದಿದೆ. ಡಿಕೆಶಿ ಆಪ್ತ ಎನ್ನಲಾಗುವ ಎಂಎಲ್`ಸಿ ರವಿ ನಿವಾಸದ ಮೇಲೂ ದಾಳಿ ನಡೆದಿದೆ. ಗುಜರಾತ್`ನ 44 ಶಾಸಕರು ಬೀಡು ಬಿಟ್ಟಿರುವ ಈಗಲ್ ಟನ್ ರೆಸಾರ್ಟ್`ನಲ್ಲೂ ಐಟಿ ದಾಳಿ ನಡೆದಿದೆ.
ರಾಜ್ಯಸಭಾಚುನಾವಣೆ ಹಿನ್ನೆಲೆಯಲ್ಲಿ ಕುದುರೆ ವ್ಯಾಪಾರದ ಭಯದಿಂದ ಗುಜರಾತ್`ನ 44 ಶಾಸಕರನ್ನ ಕರೆ ತಂದು ರಾಮನಗರ ಸಮೀಪದ ಈಗಲ್`ಟನ್ ರೆಸಾರ್ಟ್`ನಲ್ಲಿ ಇರಿಸಲಾಗಿದೆ. ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಶಾಸಕರು ಬೀಡು ಬಿಟ್ಟಿದ್ದರು.ಈಗಲ್ ಟನ್ ರೆಸಾರ್ಟ್`ನಲ್ಲಿ ಡಿಕೆಶಿ ತಮಗಾಗಿ ಕಾಯ್ದಿರಿಸಿದ್ದ ಕೊಠಡಿಯಲ್ಲೂ ದಾಖಲೆ ಪತ್ರಗಳ ಪರಿಶೀಲನೆ ನಡೆದಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ