Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚೆನ್ನೈ: ಐಟಿ ದಾಳಿ ಬಿಜೆಪಿ-ಆರೆಸ್ಸೆಸ್ ಷಡ್ಯಂತ್ರ: ಎಐಎಡಿಎಂಕೆ

ಚೆನ್ನೈ: ಐಟಿ ದಾಳಿ ಬಿಜೆಪಿ-ಆರೆಸ್ಸೆಸ್ ಷಡ್ಯಂತ್ರ: ಎಐಎಡಿಎಂಕೆ
ಚೆನ್ನೈ , ಶುಕ್ರವಾರ, 7 ಏಪ್ರಿಲ್ 2017 (14:00 IST)
ನಗರದಲ್ಲಿ ಇಂದು 32 ಕಡೆ ನಡೆದ ಐಟಿ ದಾಳಿಯ ಹಿಂದೆ ಬಿಜೆಪಿ, ಆರೆಸ್ಸೆಸ್ ಕೈವಾಡವಿದೆ ಎಂದು ಎಐಎಡಿಎಂಕೆ ಮುಖಂಡ ಆರೋಪಿಸಿದ್ದಾರೆ.
 
ಎಐಎಡಿಎಂಕೆ ಪಕ್ಷವನ್ನು ಮುಗಿಸಲು ಬಿಜೆಪಿ-ಆರೆಸ್ಸೆಸ್ ಷಡ್ಯಂತ್ರ ರೂಪಿಸಿದೆ ಎಂದು ಎಐಎಡಿಎಂಕೆ ಸಂಸದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ದಿವಂಗತ ಮಾಜಿ ಸಿಎಂ ಜಯಲಲಿತಾ ನಿಧನದಿಂದ ತೆರುವಾದ ಆರ್‌.ಕೆ.ನಗರ್ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಹಣ ಸಂಗ್ರಹಸಿದ್ದಾರೆ ಎನ್ನುವ ಶಂಕೆಯಿಂದ ಐಟಿ ದಾಳಿ ನಡೆದಿದೆ ಎನ್ನಲಾಗಿದೆ.
 
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಆಪ್ತರಾದ ಆರೋಗ್ಯ ಸಚಿವ ವಿಜಯ್ ಭಾಸ್ಕರ್, ಶರತ್ ಕುಮಾರ್ ಸೇರಿದಂತೆ 32 ನಾಯಕರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
 
ಸಚಿವ ವಿಜಯ್ ಭಾಸ್ಕರ್ ನಿವಾಸದಲ್ಲಿ 2.2 ಕೋಟಿ ರೂಪಾಯಿ ಹಣವನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇತರ ಮುಖಂಡರ ನಿವಾಸದಲ್ಲಿ ತಪಾಸಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.    

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆ ಪ್ರಚಾರ: ಜೆಡಿಎಸ್ ಬಂಡಾಯ ಶಾಸಕರಲ್ಲಿಯೇ ಭಿನ್ನಮತ