ಜೆಮ್ ಶೆಡ್ ಪುರ : ವಿಧವಾ ಮಹಿಳೆಯೊಬ್ಬಳ ಮೇಲೆ ಒಂದೇ ಗ್ರಾಮದ 10 ಮಂದಿ ಸೇರಿ ಥಳಿಸಿದ ಘಟನೆ ಜಾರ್ಖಂಡ್ ನ ಸೆರೈಕೆಲಾ ಖಾರ್ಸವಾನ್ ಜಿಲ್ಲೆಯ ಘೆರಾಬೆರಾ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಮಗನ ಜೊತೆ ವಾಸವಾಗಿದ್ದಳು. ಮಹಿಳೆಯ ನಡತೆ ಸರಿಯಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಸೇರಿ ಆಕೆಯನ್ನು ಥಳಿಸಿದ್ದಾರೆ.
ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.